ಉಡುಪಿ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಚೂರಿ ಇರಿತದ ವರೆಗೂ ಮುಂದುವರಿದ ಘಟನೆ ನಡೆದಿದೆ.
ಬಾಗಲಕೋಟೆಯ ಮಲಕರಿಸಿದ್ದ ಅವರು ಅಳಿಯ ಗೌಡಕ್ಕ ಬಿರಾದರ ಜತೆಗೆ 15 ದಿನಗಳ ಹಿಂದೆ ಉಡುಪಿಗೆ ಕೆಲಸಕ್ಕೆ ಬಂದಿದ್ದು, ಸ್ವಾಮಿ ಎಂಬವರ ಜೊತೆ ಕೆಲಸಕ್ಕೆ ಹೋಗುತ್ತಿದ್ದರು. ಕೆಲಸ ಮುಗಿದ ಬಳಿಕ ಪ್ರತಿದಿನ ರಾತ್ರಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಹತ್ತಿರ ಇರುವ ಗೇಟ್ ಎದುರು ಮಲಗುತ್ತಿದ್ದರು.
ಮಾ.20ರಂದು ಕೂಡ ಕೆಲಸ ಮುಗಿಸಿ ರಾತ್ರಿ 10ಕ್ಕೆ ಬಂದು ಮಲಗುವಾಗ ಮೊಬೈಲ್ ನೋಡುತ್ತಿದ್ದರು. ಈ ವೇಳೆ ಅಲ್ಲಿದ್ದ ನಾರಾಯಣ ಎಂಬಾತ ಬಂದು ಮೊಬೈಲ್ ಕೊಡು ಎಂದು ಕೇಳಿದ್ದು, ಮಲಕರಿಸಿದ್ದ ಕೊಡುವುದಿಲ್ಲ ಎಂದಿದ್ದ. ಇದೇ ಕಾರಣಕ್ಕೆ ಅವರಿಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ನಾರಾಯಣನು ತನ್ನಲ್ಲಿದ್ದ ಚೂರಿಯಿಂದ ಮಲಕರಿಸಿದ್ದನ ಎದೆಗೆ ಇರಿದಿದ್ದಾನೆ. ಹೆದರಿ ಓಡಿದ ಮಲಕರಿಸಿದ್ದನನ್ನು ಅಟ್ಟಿಸಿಕೊಂಡು ಬಂದು ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಅಡ್ಡಗಟ್ಟಿ ಪುನಃ ಎದೆಯ ಮಧ್ಯ ಭಾಗಕ್ಕೆ ಚೂರಿಯಿಂದ ಇರಿದಿದ್ದಾನೆ. ಆಗ ಮಲಕರಿಸಿದ್ದನನ್ನು ರಕ್ಷಿಸಲು ಬಂದ ಗೌತಮ್ ಎಂಬಾತನಿಗೂ ಆರೋಪಿ ಇರಿದಿದ್ದಾನೆ ಎಂದು ಮಲಕರಿಸಿದ್ದ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.
Follow us on Social media