ಉಡುಪಿ: ಗಾಂಜಾ, ಅಮಲು ಪದಾರ್ಥ ಸೇವನೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲದ ಉಪೇಂದ್ರ ಪೈ ಸರ್ಕಲ್ ಸಮೀಪದ ಮದ್ಯದಂಗಡಿ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಅಮಲಿನ ಸ್ಥಿತಿಯಲ್ಲಿದ್ದ ಸಾಹಿಲ್ ಮೆಹ್ತಾ (20), ಶೌನಕ್ ಮುಖೋಪಾಧ್ಯಾಯ (19) ಮತ್ತು ವಾಲುಸ್ಚಾ ಮಾರ್ಟಿನ್ಸ್ (20) ಬಂಧಿತರು.
ಇವರು ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media