ಬೆಂಗಳೂರು: ನನ್ನ ಮುಟ್ಟಬೇಡ, ಬ್ಯೂಟಿ ಹಾಳಾಗುತ್ತೆ ಅಂತ ಗಂಡನಿಗೆ ಹೆಂಡತಿಯೊಬ್ಬಳು ಡಿಮ್ಯಾಂಡ್ ಮೇಲೆ ಡಿಮ್ಯಾಂಡ್ ಮಾಡಿರೋ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಂಡತಿ ಪ್ರತಿದಿನ ಕೊಡುವ ಕಾಟಕ್ಕೆ ಬೆಸತ್ತು ಆಕೆಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಪತಿ ಶ್ರೀಕಾಂತ್. ಎರಡು ವರ್ಷಗಳ ಹಿಂದೆ ಶ್ರೀಕಾಂತ್ ಮದುವೆಯಾಗಿದ್ದರು. 2 ವರ್ಷಗಳು ಕಳೆದರು ಹೆಂಡತಿ ಸಂಸಾರ ನಡೆಸಲು ನೋ ಅಂತಿದ್ದಳಂತೆ. ನನ್ನ ಮುಟ್ಟ ಬೇಡ, ಬ್ಯೂಟಿ ಹಾಳಾಗುತ್ತೆ, ನನಗಿವಾಗ ಮಕ್ಕಳು ಬೇಡ, ದತ್ತು ಮಕ್ಕಳನ್ನ ಸಾಕೋಣ, 60 ವರ್ಷದ ನಂತರ ಮಕ್ಕಳನ್ನ ಮಾಡಿಕೊಳ್ಳೋಣ ಅಂತಿದ್ದಳಂತೆ ಪತ್ನಿ.
ಡಿವೋರ್ಸ್ ಕೊಡು ಇಲ್ಲ ಅಂದ್ರೆ 45 ಲಕ್ಷ ರೂಪಾಯಿ ಕೊಡು ಅಂತ ಡಿಮ್ಯಾಂಡ್ ಮಾಡುತ್ತಿದ್ದಳಂತೆ. ಬಲವಂತವಾಗಿ ಮುಟ್ಟಿದ್ರೆ ಡೆತ್ ನೋಟ್ ಬರೆದಿಟ್ಟು ಸಾಯ್ತೀನಿ ಅಂತ ಗಂಡನನ್ನೇ ಹೆದರಿಸಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳಂತೆ ಪತ್ನಿ. ಈಗಾಗಲೇ ಮದುವೆಗೆ ಲಕ್ಷಾಂತರ ಖರ್ಚು ಮಾಡಿ ಒಡವೆ ಮಾಡಿಸಿ ಕೊಟ್ಟಿದ್ದರಂತೆ. ಆದ್ರೆ ತಾಳಿ, ಕಾಲುಂಗುರ ಹಾಕಲ್ಲ ಅಂತ ಹೆಂಡತಿ ಹೇಳುತ್ತಾಳೆ ಅಂತ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
Follow us on Social media