ತಿರುವನಂತಪುರಂ: ಒಂದೂವರೆ ವರ್ಷದ ಪುಟ್ಟ ಕಂದಮ್ಮನ ಗಂಟಲಲ್ಲಿ ಚಕ್ಕುಲಿ ಸಿಲುಕಿ ಮೃತಪಟ್ಟ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
ವಿಜೇಶ್ ಹಾಗೂ ದಿವ್ಯಾ ದಾಸ್ ಎಂಬವರ ಅವಳಿ ಮಕ್ಕಳಲ್ಲಿ ಒಬ್ಬನಾದ ವೈಷ್ಣವ್ ಮೃತಪಟ್ಟ ಮಗು. ಆಟ ಆಡಿಕೊಂಡಿದ್ದ ಒಂದೂವರೆ ವರ್ಷದ ಪುಟ್ಟ ಮಗು ಆಡುತ್ತಾ ಆಡುತ್ತಾ ಚಕ್ಕುಳಿಯನ್ನು ಬಾಯಿಗೆ ಹಾಕಿದೆ. ಆದರೆ ಈ ಚಕ್ಕುಲಿ ಆ ಮಗುವಿನ ಗಂಟಲಲ್ಲಿ ಸಿಲುಕಿ ಉಸಿರಾಡಲು ಆಗದೆ ಒದ್ದಾಡುತ್ತಿತ್ತು. ಈ ಕೂಡಲೆ ಮಗುವನ್ನು ಪೋಷಕರು ಕೊಲ್ಲಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರ ವೇಳೆಗೆ ಮಗು ಕೊನೆಯುಸಿರೆಳೆದಿದೆ. ಇದೀಗ ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲೇರಿದೆ.
Follow us on Social media