ನವದೆಹಲಿ: ಕೌನ್ ಬನೇಗಾ ಕರೋಡ್ ಪತಿ ಎಂಬ ಹಿಂದಿ ಶೋ ನಲ್ಲಿ ಕೋಟಿ ಗೆದ್ದ 14ವರ್ಷದ ಪೋರ ಸಣ್ಣ ವಯಸ್ಸಿನಲ್ಲೇ ದಾಖಲೆ ಬರೆದಿದ್ದಾನೆ.
ಬಾಲಿವುಡ್ ಸ್ಟಾರ್ ಅಮಿತಾಭ್ ಬಚ್ಚನ್ ನಡೆಸಿಕೊಡುವಂತಹ ಹಿಂದಿಯ ಕೌನ್ ಬನೇಗಾ ಕರೋಡ್ ಪತಿ ಎಂಬ ಶೋ ನಲ್ಲಿ ಹರಿಯಾಣದ ಮಹೇಂದ್ರಗಢ್ ಮೂಲದ 8ನೇ ತರಗತಿ ವಿದ್ಯಾರ್ಥಿ ಮಯಾಂಕ್ ಭಾಗವಹಿಸಿ 15 ಪ್ರಶ್ನೆಗಳಿಗೆ ಉತ್ತರಿಸಿ ಒಂದು ಕೋಟಿ ಗೆದ್ದು ದಾಖಲೆ ಬರೆದಿದ್ದಾನೆ. ಕೌನ್ ಬನೇಗಾ ಕರೋಡ್ ಪತಿಯಲ್ಲಿ ನಡೆಯುವ ಜನಪ್ರಿಯ ಪ್ರಶ್ನೆಗಳಿಗೆ ಉತ್ತರಿಸಿದ 14 ವರ್ಷದ ಕಿರಿಯ ಪೋರ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂ.ಗೆದ್ದ ಹೆಗ್ಗಳಿಕೆಗೆ ಹರಿಯಾಣದ ಮಹೇಂದ್ರಗಢ್‌ನ 8 ನೇ ತರಗತಿಯ ವಿದ್ಯಾರ್ಥಿ ಮಯಾಂಕ್ ಪಾತ್ರನಾಗಿದ್ದಾನೆ. 14 ವರ್ಷದ ಈ ಬಾಲಕ 1 ಕೋಟಿ ರೂ.ಗೆದ್ದ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದು, ಹೊಸ ಇತಿಹಾಸ ನಿರ್ಮಿಸಿದ್ದಾನೆ. 15 ಪ್ರಶ್ನೆಗಳಿಗೆ ಉತ್ತರ ಕೊಟ್ಟು, 1 ಕೋಟಿ ರೂ ಗೆದ್ದು, 16ನೇ ಪ್ರಶ್ನೆಗೂ ಸರಿಯಾದ ಉತ್ತರ ನೀಡಿದ್ದಾನೆ. ಈತನ ಗುರಿ ಕೇವಲ ಒಂದು ಕೋಟಿ ಆಗಿರಲಿಲ್ಲ. ಏಳು ಕೋಟಿಯನ್ನು ಗುರಿಯಾಗಿಸಿಟ್ಟುಕೊಂಡಿದ್ದ. ಏಳು ಕೋಟಿಯ ಪ್ರಶ್ನೆಗೆ ಉತ್ತರಿಸೋಕೆ ಆಗದೇ ಆಟದಿಂದ ವಾಪಸ್ಸಾಗಿದ್ದಾನೆ. ಈತನ ಸಾಧನೆಗೆ ಹರಿಯಾಣ ಸಿಎಂ ಮನೊಹರ್ ಲಾಲ್ ಖಟ್ಟರ್ ಅಭಿನಂದಿಸಿದ್ದಾರೆ. ಇದು ಮೊದಲ ಬಾರಿ 14 ವರ್ಷದ ಪೋರ ಕೋಟಿಗೆದ್ದ ಇತಿಹಾಸವಾಗಿದೆ.
Follow us on Social media