ಹೊಸದಿಲ್ಲಿ: ಲಂಡನ್‌ನಿಂದ ಅಮೃತಸರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದೊಳಗೆ ನೀರು ಸೋರಿಕೆಯಾಗುತ್ತಿರುವ ವಿಡಿಯೋವೊಂದು ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ಬಗ್ಗೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ.
ವಿಮಾನದ ಓವರ್‌ಹೆಡ್ ಸ್ಟೋರೇಜ್‌ನ ಪ್ಯಾನಲ್ ನಿಂದ ನೀರು ಸೋರಿಕೆಯಾಗುತ್ತಿರುವುದು ವಿಡಿಯೋದಲ್ಲಿದೆ. ಈ ಬಗ್ಗೆ ವ್ಯಕ್ತಿಯೊಬ್ಬರು ಮೊದಲಿಗೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಅದರಲ್ಲಿ ಆತ ಹೀಗೆ ಬರೆದಿದ್ದರು. 2021 ರಲ್ಲಿ ಟಾಟಾ ಸನ್ಸ್ ಖರೀದಿಸಿದ ಏರ್ ಇಂಡಿಯಾದ ಹೀಗಿದೆ ನೋಡಿ ಎಂದು ಹೇಳಿದ್ದರು.
ನವೆಂಬರ್ 24 ರಂದು ಗ್ಯಾಟ್ವಿಕ್‌ನಿಂದ ಅಮೃತಸರಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಏರ್ ಇಂಡಿಯಾ ಸ್ಪಷ್ಟನೆ ನೀಡಿದ್ದು, ನೀರು ಸೋರುತ್ತಿರುವ ಸ್ಥಳದಲ್ಲಿದ್ದ ಪ್ರಯಾಣಿಕರನ್ನು ಇತರ ಖಾಲಿ ಆಸನಗಳಿಗೆ ಸ್ಥಳಾಂತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಅಲ್ಲದೆ ವಿಮಾನದಲ್ಲಿರುವ ಅತಿಥಿಗಳ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಏರ್ ಇಂಡಿಯಾ ಬದ್ಧವಾಗಿದೆ ಮತ್ತು ಈ ಅನಿರೀಕ್ಷಿತ ಘಟನೆಗೆ ನಾವು ವಿಷಾದಿಸುತ್ತೇವೆ ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.https://twitter.com/baldwhiner/status/1729856754068959379
Follow us on Social media