ನ. 30ರಿಂದ ಡಿ. 8ರ ವರೆಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಬೆಂಗಳೂರು-ಮಂಗಳೂರು ನಡುವೆ ವಿಮಾನ ಹಾರಾಟದ ಸಮಯವನ್ನು ಬದಲಾಯಿಸಿದೆ.
ಐಎಕ್ಸ್ 782 ವಿಮಾನವು ಬೆಂಗಳೂರಿನಿಂದ ಬೆಳಗ್ಗೆ 9.40ಕ್ಕೆ ಆಗಮಿಸಲಿದ್ದು, ಬೆಳಗ್ಗೆ 10.10ಕ್ಕೆ ವಿಮಾನ 678 ಆಗಿ ಬೆಂಗಳೂರಿಗೆ ಹೊರಡಲಿದೆ.ಇನ್ನು ಕಣ್ಣೂರು-ಬೆಂಗಳೂರು-ಮಂಗಳೂರು- ಬೆಂಗಳೂರು- ತಿರುವನಂತಪುರ ವಲಯದಲ್ಲಿ ಕಾರ್ಯನಿರ್ವಹಿಸುವ ವಿಮಾನ ಐಎಕ್ಸ್ 1795 ಬೆಂಗಳೂರಿನಿಂದ ರಾತ್ರಿ 7.20ಕ್ಕೆ ಬಂದು 7.50ಕ್ಕೆ ವಿಮಾನ ಐಎಕ್ಸ್ 792 ಆಗಿ ಬೆಂಗಳೂರಿಗೆ ಹೊರಡ ಲಿದೆ (ಪ್ರಸ್ತುತ ಸಂಜೆ 7.35 ಮತ್ತು ರಾತ್ರಿ 8.15ಕ್ಕೆ ನಿರ್ಗಮನ).
ಬೆಂಗಳೂರಿನಿಂದ ವಾರಾಣಸಿಗೆ ಹೊರಟು ಮಂಗಳೂರಿಗೆ ತೆರಳುವ ಮಾರ್ಗದಲ್ಲಿ ವಿಳಂಬವಾದ ಕಾರಣ ವಿಮಾನ ಯಾನ ಸಂಸ್ಥೆ ಸಮಯವನ್ನು (ಐಎಕ್ಸ್ 782 ಮತ್ತು ಐಎಕ್ಸ್ 678) ಬದಲಾಯಿಸಿದೆ.
Follow us on Social media