ಬೆಂಗಳೂರು: ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಜಯ್ ಪಾರ್ಥೀವ ಶರೀರ ನಾಳೆ ರಾತ್ರಿ ಬೆಂಗಳೂರಿಗೆ ಬರಲಿದೆ ಎಂದು ಅವರ ಚಿಕ್ಕಪ್ಪ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ಸ್ಪಂದನ ಮರಣೋತ್ತರ ಪರೀಕ್ಷೆ ಕೊನೆಗೊಂಡಿದೆ, ವಿಧಿವಿಧಾನ ಪ್ರಕ್ರಿಯೆ ಬಾಕಿಯಿದೆ, ಆಕೆಯ ಅಂತ್ಯಸಂಸ್ಕಾರ ಎಲ್ಲಿ ನಡೆಸಬೇಕು ಅನ್ನೋದು ತೀರ್ಮಾನವಾಗಿಲ್ಲ. ಪಾರ್ಥೀವ ಶರೀರ ನಗರಕ್ಕೆ ಬಂದ ಬಳಿಕ ಕುಟುಂಬ ಸದಸ್ಯರು ಒಂದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
Follow us on Social media