ಸುರತ್ಕಲ್ : ದರೋಡೆ ಮಾಡುವ ಉದ್ದೇಶದಿಂದ ಎಟಿಎಂಗೆ ಜೆಸಿಬಿ ನುಗ್ಗಿಸಿ ಹಣ ಲಪಟಾಯಿಸಲು ವಿಫಲ ಯತ್ನ ನಡೆಸಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಇಲ್ಲಿನ ವಿದ್ಯಾದಾಯಿನಿ ಶಾಲೆಯ ಮುಂಭಾಗದ ಜಯಶ್ರೀ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸೌತ್ ಇಂಡಿಯನ್ ಬ್ಯಾಂಕ್ ಬ್ರಾಂಚ್‌ನ ಎಟಿಎಂ ಮೆಶಿನ್ ಗೆ ಕಳೆದ ರಾತ್ರಿ 2 ಗಂಟೆ ಸುಮಾರಿಗೆ ದರೋಡೆಗೆ ಸ್ಕೆಚ್ ಹಾಕಿದ್ದರು. ಜೆಸಿಬಿ ನುಗ್ಗಿಸುವ ವೇಳೆ ಎಟಿಎಂನ ಗಾಜು ಪುಡಿಯಾಗುತ್ತಿದ್ದಂತೆಯೇ ಎಮರ್ಜೆನ್ಸಿ ಸೈರನ್ ಮೊಳಗಿದ್ದು, ಕಳ್ಳರು ಜೆಸಿಬಿ ಸಹಿತ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಸದ್ಯ ಕಳ್ಳರ ಚಲನವಲನ ಎಟಿಎಂ ನ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಪಡೆದುಕೊಂಡಿದ್ದಾರೆ.
ಸ್ಥಳಕ್ಕೆ ಡಿಸಿಪಿ ದಿನೇಶ್ ಕುಮಾರ್ ಸಹಿತ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media