ಬೆಂಗಳೂರು: ಪ್ರೀತಿಸಿದ ಹುಡುಗ ಮೋಸ ಮಾಡಿ ವಂಚನೆ ಮಾಡಿದ ಕಾರಣಕ್ಕೆ ನೊಂದ ಯುವತಿ ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ತರಬೇತುದಾರನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾಶ್ರೀ(25) ಆತ್ಮಹತ್ಯೆ ಮಾಡಿಕೊಂಡ ಯುವತಿ.
ಅಕ್ಷಯ್ (27) ಬಂಧಿತ ಆರೋಪಿ.
ವಿದ್ಯಾಶ್ರಿಯು ನಗರದ ಕಂಪನಿಯೊಂದದರಲ್ಲಿ ಕೆಲಸ ಮಾಡುತ್ತಿದ್ದರು.
ಅಲ್ಲದೆ ‘ಮಿಸ್ ಆಂಧ್ರ’ ಕಿರೀಟವನ್ನು ಪಡೆದಿದ್ದರು.
ಇವರು ಕೆಂಪಾಪುರದಲ್ಲಿ ತಾಯಿ ಜೊತೆ ವಾಸವಿದ್ದರು ಎಂದು ಮೂಲಗಳು ತಿಳಿಸಿವೆ.
ಆರೋಪಿ ಅಕ್ಷಯ್ ಮೂಲತಃ ಮಂಡ್ಯದವನಾಗಿದ್ದು, ಪೋಷಕರ ಜೊತೆ ನಗರದಲ್ಲಿ ವಾಸವಾಗಿದ್ದನು.
ಜೊತೆಗೆ ಬಸವೇಶ್ವರ ನಗರದಲ್ಲಿರುವ ಜಿಮ್ ನಲ್ಲಿ ತರಬೇತುದಾರನಾಗಿ ಕೆಲಸ ಮಾಡುತ್ತಿದ್ದನು.
2021ರಲ್ಲಿ ಫೇಸ್ ಬುಕ್ ನಲ್ಲಿ ಅಕ್ಷಯ್ ವಿದ್ಯಾಶ್ರೀ ಗೆ ರಿಕ್ವೆಸ್ಟ್ ಕಳುಹಿಸಿ ‘ನಾನು ನಿಮ್ಮ ಅಭಿಮಾನಿ ಎಂದು ಹೇಳಿದ್ದನು.
ಆ ಮೇಲೆ ಇವರ ಮಧ್ಯೆ ಸ್ನೇಹ ಶುರುವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳಿಕ ಇವರಿಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು.
ಅನೇಕ ಬಾರಿ ಭೇಟಿ ಆಗಿದ್ದು, ಮದುವೆಯಾಗುತ್ತೇನೆ ಎಂದು ನಂಬಿಸಿದ್ದನು ಎನ್ನಲಾಗಿದೆ.
ಅಕ್ಷಯ್ ನು ವಿದ್ಯಾಶ್ರೀ ಜೊತೆ 1.76 ಲಕ್ಷ ಸಾಲ ಪಡೆದಿದ್ದು, ಜೊತೆಗೆ ಲೈಂಗಿಕವಾಗಿ ಬಳಸಿಕೊಂಡಿದ್ದನು ಎಂದು ಹೇಳಲಾಗಿದೆ.
ವಿದ್ಯಾಶ್ರೀ ಜೊತೆ ಪಡೆದುಕೊಂಡ ಹಣ ವಾಪಸು ಕೇಳಿದಾಗ ಕಿರುಕುಳ ನೀಡಲು ಆರಂಭಿಸಿದ್ದನು.
ಖಾಸಗಿ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದನು.
ಹಾಗಾಗಿ ನೊಂದ ವಿದ್ಯಾಶ್ರೀ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಡೆತ್ ನೋಟ್ ನಲ್ಲಿ ವಿದ್ಯಾಶ್ರೀಯು ‘ಪ್ರೀತಿಯ ನಾಟಕವಾಡಿದ್ದ ಅಕ್ಷಯ್ ನನ್ನ ಕೈಯಿಂದ 1.76 ಲಕ್ಷ ಸಾಲ ಪಡೆದಿದ್ದನು.
ಅದನ್ನು ವಾಪಸು ಕೇಳಿದರೆ ಬೈಯುತ್ತಿದ್ದ. ಅಲ್ಲದೆ ಕುಟುಂಬವನ್ನು ನಿಂದಿಸುತ್ತಿದ್ದ.
ಈತನ ಕಿರುಕುಳದಿಂದ ಮಾನಸಿಕವಾಗಿ ನೊಂದಿದ್ದಾನೆ.
ನನಗೆ ಬದುಕಲು ಆಗುತ್ತಿಲ್ಲ’ ಎಂದು ಬರೆದು ಕೊನೆಗೆ ‘ಎಲ್ಲ ಹುಡುಗಿಯರಿಗೆ ನನ್ನದೊಂದು ವಿನಂತಿ.
ಯಾರನ್ನೂ ನಂಬಿ ಪ್ರೀತಿ ಮಾಡಬೇಡಿ.
ಅಮ್ಮ, ತಮ್ಮ ನನ್ನನ್ನು ಕ್ಷಮಿಸಿ’ ಎಂದು ಬರೆದಿದ್ದಾರೆ.
Follow us on Social media