ಪುತ್ತೂರು: ದಕ್ಷಿಣ ಕನ್ನಡದ ಪುತ್ತೂರಿನ ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್-2 ಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಜಯಭೇರಿ ಗಳಿಸಿದ್ದು ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ಪುತ್ತಿಲ ಪರಿವಾರದ ಬೆಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ವಾರ್ಡ್-2ರ ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸದಸ್ಯ ರುಕ್ಮಯ್ಯ ಮೂಲ್ಯರವರ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಜು.23ರಂದು ನಡೆದ ಉಪ ಚುನಾವಣೆಯಲ್ಲಿ ಒಟ್ಟು 1237 ಮತಗಳ ಪೈಕಿ 999 ಮತಗಳು ಚಲಾವಣೆಯಾಗಿದೆ.
ಇದರಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499 ಮತ, ಕಾಂಗ್ರೆಸ್ ಬೆಂಬಲಿತ ಪುರುಷೋತ್ತಮ ಪ್ರಭು 353 ಮತ ಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ ಭಂಡಾರಿ ಕೇವಲ 140 ಮತಗಳನ್ನು ಪಡೆದುಮೂರನೇ ಸ್ಥಾನಕ್ಕೆ ತಳ್ಳಳ್ಪಟ್ಟಿದ್ದಾರೆ.
Follow us on Social media