ಬಂಟ್ವಾಳ : ಪುದು ಗ್ರಾಮ ಪಂಚಾಯಿತಿನ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೊಹಮ್ಮದ್ ಇಕ್ಬಾಲ್ ಪಾಡಿ ಅವರು ಗೆಲುವು ಸಾಧಿಸಿದ್ದಾರೆ.ಗ್ರಾ.ಪಂ. ಸದಸ್ಯ ಹುಸೈನ್ ಪಾಡಿ ಅವರ ನಿಧನದ ಹಿನ್ನೆಲೆಯಲ್ಲಿ ತೆರವಾದ ಪುದು ಗ್ರಾಮ ಪಂಚಾಯತ್ ನ ಒಂದು ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ಒಂದು ಸದಸ್ಯ ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಈ ಪೈಕಿ ದಿ. ಹುಸೈನ್ ಪಾಡಿ ಅವರ ಮಗ ಮೊಹಮ್ಮದ್ ಇಕ್ಬಾಲ್ ಪಾಡಿ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ದಿಸಿ 385 ಮತಗಳನ್ನು ಪಡೆದು ವಿಜಯಿಯಾದರು. ಎಸ್.ಡಿ.ಪಿ.ಬೆಂಬಲಿತ ಅಭ್ಯರ್ಥಿ ಅಬ್ದುಲ್ ಲತೀಫ್ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ 91 ಮತಗಳನ್ನು ಪಡೆದಿದ್ದರೆ ಈ ಬಾರಿ ಕೇವಲ 39 ಮತಗಳನ್ನು ಮಾತ್ರ ಪಡೆಯುವ ಮೂಲಕ ಎಸ್ಡಿಪಿಐ ವರ್ಚಸ್ಸು ಕುಸಿದಿದೆ ಎಂಬುದನ್ನು ಸಾಬೀತುಪಡಿಸಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿ ಮುಹಮ್ಮದ್ ಅಶ್ರಫ್ ಮಾರಿಪಳ್ಳ 140 ಮತಗಳ ನ್ನು ಗಳಿಸಿದ್ದಾರೆ. 8 ಮತಗಳು ತಿರಸ್ಕೃತಗೊಂಡಿದ್ದು ಒಟ್ಟು572 ಮತಗಳು ಚಲಾವಣೆಯಾಗಿತ್ತು.
ಬಂಟ್ವಾಳ ತಹಶೀಲ್ದಾರ್ ಎಸ್.ಬಿ.ಕೂಡಲಗಿ ನೇತೃತ್ವದಲ್ಲಿ ಚುನಾವಣೆ ಅಧಿಕಾರಿಯಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ, ಸಹಾಯಕ ಚುನಾವಣಾಧಿಕಾರಿಯಾಗಿ ಪುದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕೆ.ಎ, ಏಣಿಕೆ ಮೇಲ್ವಿಚಾರಕರರಾಗಿ ಉಪತಹಶೀಲ್ದಾರ್ ನವೀನ್ ಬೆಂಜನಪದವು, ಎಣಿಕೆ ಸಹಾಯಕರಾಗಿ ಸೀತಾರಾಮ ಕಮ್ಮಾಜೆ, ಜೆ.ಜನಾರ್ದನ, ಶ್ರೀ ಕಲಾ, ಸುಂದರ, ಕಿರಣ್ ಹಾಗೂ ಚಂದು ಕಾರ್ಯನಿರ್ವಹಿಸಿದರು.
ಪುದು ಗ್ರಾಮ ಪಂಚಾಯತ್ ನೂತನ ಸದಸ್ಯರಾಗಿ ಆಯ್ಕೆಯಾದ ಮುಹಮ್ಮದ್ ಇಕ್ಬಾಲ್ ಪಾಡಿ ಅವರನ್ನು ಜಿ.ಪಂ.ಮಾಜಿ ಸದಸ್ಯ ಉಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ರಶೀದಾ ಭಾನು, ಉಪಾಧ್ಯಕ್ಷ ಇಕ್ಬಾಲ್ ಸುಜೀರ್ ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಯುವ ಕಾಂಗ್ರೆಸ್ ಮುಖಂಡ ಎಂ. ತೌಫೀಕ್, ಪ್ರಮುಖರಾದ ಇಸ್ಮಾಯಿಲ್ ಕೆ.ಇ.ಎಲ್, ಹಕೀಮ್ ಮಾರಿಪಳ್ಳ, ಅಹಮದ್ ದಿಲ್, ಕರೀಂ ದಿಲ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ಆಚರಿಸಿ ಅಭಿನಂದಿಸಿದರು.
Follow us on Social media