ಮಂಗಳೂರು: ಅಕ್ರಮವಾಗಿ 10 ಸಾವಿರ ಯುಎಸ್ ಡಾಲರ್ ಕರೆನ್ಸಿಯನ್ನು ವಿದೇಶಕ್ಕೆ ಕೊಂಡೊಯ್ಯಲು ಯತ್ನಿಸುತ್ತಿದ್ದ ಬೆಂಗಳೂರು ಮೂಲದ ವ್ಯಕ್ತಿಯನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ(ಕೇಂದ್ರೀಯ ಕೈಗಾರಿಕಾ ಭದ್ರತಾ ದಳ) ವಶಕ್ಕೆ ತೆಗೆದುಕೊಂಡಿದ್ದಾರೆ.
ಸೋಮವಾರ ಬೆಳಗ್ಗೆ ತಪಾಸಣೆ ವೇಳೆ ಬೆಂಗಳೂರಿನ ಶಶಾಂಕ್ ಬ್ಯಾಸಾನಿ ಗುಪ್ತ ಎಂಬಾತ ತನ್ನ ಪ್ಯಾಂಟ್ ಜೇಬು ಹಾಗೂ ಬ್ಯಾಗ್ನಲ್ಲಿ 100 ಡಾಲರ್ನ 51 ಹಾಗೂ 100ರ 49 ನೋಟುಗಳನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ಇರಿಸಿಕೊಂಡಿರುವುದು ಪತ್ತೆಯಾಗಿದೆ.
ಆತ ದುಬೈಗೆ ಸ್ಪೈಸ್ಜೆಟ್ ವಿಮಾನದಲ್ಲಿ ತೆರಳುವುದಕ್ಕೆ ಮುಂದಾಗಿದ್ದ. ಈ ವೇಳೆ ತಪಾಸಣೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ. 10 ಸಾವಿರ ಯುಎಸ್ ಡಾಲರ್ ನೋಟುಗಳನ್ನು ಕಸ್ಟಮ್ಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿದ್ದು ವಿಸ್ತೃತ ತನಿಖೆ ನಡೆಸಲಾಗುತ್ತಿದೆ.