ಬೆಂಗಳೂರು : 1ರಿಂದ 5ನೇ ತರಗತಿವರೆಗೆ ಕರ್ನಾಟಕದಲ್ಲಿ ಆನ್ ಲೈನ್ ಶಿಕ್ಷಣ ಮತ್ತೆ ಜಾರಿಯಾಗಲಿದೆ. ಕೇಂದ್ರ ಮಾನವ ಸಂಪನ್ಮೂಲಭಿವೃದ್ದಿ ಮತ್ತು ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ 1ರಿಂದ 10ನೇ ತರಗತಿಯವರೆಗೆ “ನಿಯಮಿತ” ಆನ್‌ಲೈನ್ ಕ್ಲಾಸ್ಗೆ ಅವಕಾಶ ನೀಡಿದೆ.
ಇದು ರಾಜ್ಯ ಪಠ್ಯ ಕ್ರಮ , ಸಿಬಿಎಸ್ ಇ, ಐಸಿಎಸ್ ಇ , ಸಹಿತ ಎಲ್ಲಾ ಪಠ್ಯಕ್ರಮಕ್ಕೂ ಅನ್ವಯವಾಗಲಿದೆ. ಆದರೆ ಆನ್ ಲೈನ್ ತರಗತಿಗಾಗಿ ಹೆಚ್ಚುವರಿ ಶುಲ್ಕ ಪಡೆಯುವಂತಿಲ್ಲ ಎಂದು ಸೂಚಿಸಿದೆ. ಆದರೆ ಈ ಆದೇಶ ತಜ್ಞರ ವರದಿ ಸಲ್ಲಿಕೆಯಾಗುವವರೆಗೆ ಮಾತ್ರ ಜಾರಿಯಲ್ಲಿರಲಿದೆ. ರಾಜ್ಯ ಸರ್ಕಾರ ರಚಿಸಿರುವ ತಜ್ಞರ ಸಮಿತಿ ವರದಿ ಬರುವವರೆಗೂ ಸೀಮಿತ ಅವಧಿಯ ಆನ್‌ಲೈನ್ ಶಿಕ್ಷಣ ಮಾಡಬಹುದು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಇದರ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶೇಖರ್ ಆದೇಶ ಹೊರಡಿಸಿದ್ದಾರೆ.
1ರಿಂದ 5ನೇ ತರಗತಿವರೆಗೆ 30 ರಿಂದ 45 ನಿಮಿಷಗಳ 2 ಅವಧಿ ಮೀರದಂತೆ ವಾರದಲ್ಲಿ ಗರಿಷ್ಟ 3 ದಿನ ಹಾಗೂ 6 ರಿಂದ 8ನೇ ತರಗತಿವರೆಗೆ , 30 ರಿಂದ 45 ನಿಮಿಷಗಳ 2 ಅವಧಿ ಮೀರದಂತೆ ವಾರದಲ್ಲಿ ಗರಿಷ್ಟ 5 ದಿನ ಹಾಗೂ 9 ಮತ್ತು 10ನೇ ತರಗತಿಗಳಿಗೆ 30 ರಿಂದ 45 ನಿಮಿಷಗಳ ೪ಅವಧಿ ಮೀರದಂತೆ ವಾರದಲ್ಲಿ ಗರಿಷ್ಟ 5ದಿನ ತರಗತಿ ನಡೆಸಲು ಅವಕಾಶ ಕಲ್ಪಿಸಿದೆ.
ಇನ್ನು ಪೂರ್ವ ಪ್ರಾಥಮಿಕ ತರಗತಿಗೆ ಅನ್ ಲೈನ್ ತರಗತಿ ಇರುವುದಿಲ್ಲ. ಆದರೆ ವಾರದಲ್ಲಿ ಒಮ್ಮೆ ಮಕ್ಕಳ ಪೋಷಕರೊಂದಿಗೆ ಆನ್ ಲೈನ್ ಸಂವಾದ ನಡೆಸಬಹುದಾಗಿದೆ ಎಂದು ಸೂಚಿಸಿದೆ.
Follow us on Social media