ಹೈದರಾಬಾದ್ : ಹೈದರಾಬಾದಿನ ಅಂಬರ್‌ಪೇಟ್‌ನ ಬಾಲಕನೊಬ್ಬ ತಂದೆಯ ಮರಣದಿಂದ ಕುಟುಂಬಕ್ಕೆ ಬಂದ 36 ಲಕ್ಷ ರೂಪಾಯಿಗಳನ್ನು ಆನ್ಲೈನ್ ಗೇಮ್ನಲ್ಲಿ ಜೂಜಾಡಿ ಕಳೆದುಕೊಂಡಿರುವ ಘಟನೆ ನಡೆದಿದೆ.
ಬಾಲಕನ ತಾಯಿ ತನ್ನ ಎರಡು ಬ್ಯಾಂಕ್ ಖಾತೆಗಳಿಂದ 36 ಲಕ್ಷ ರೂಪಾಯಿ ನಾಪತ್ತೆಯಾಗಿರುವ ಬಗ್ಗೆ ಹೈದರಾಬಾದ್ ಸೈಬರ್ ಕ್ರೈಂ ಬ್ರಾಂಚ್ ಗೆ ದೂರು ನೀಡಿದ್ದು, ಆಕೆಯ ಪತಿ ಸೈಬರಾಬಾದ್ ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.ಇನ್ನು ಮಹಿಳೆಯ ಮಗ ಇಂಟರ್ ಮೀಡಿಯೇಟ್ ವಿದ್ಯಾರ್ಥಿಯಾಗಿದ್ದು, ಗೇಮಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ತನ್ನ ಅಜ್ಜನ ಫೋನ್ ಬಳಸಿಕೊಂಡಿದ್ದು, ಬಾಲಕ ತನ್ನ ತಾಯಿಯ ಎರಡು ಬ್ಯಾಂಕ್ ಖಾತೆಗಳಿಂದ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಬಳಸಿದ್ದನು.ಬಾಲಕ ಮೊದಲ ಬಾರಿಗೆ 10,000 ರೂ.ಗಳ ಬೆಟ್ ಹಾಕಿ ಸೋತಿದ್ದು, ಬಳಿಕ ಗೆಲ್ಲುವ ಸಲುವಾಗಿ ಸತತವಾಗಿ ಆಟವಾಡಿದ್ದು, ಒಟ್ಟು 36 ಲಕ್ಷ ರೂ.ಗಳನ್ನು ಕಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Follow us on Social media