ಹುಬ್ಬಳ್ಳಿ: ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಸಿಡಿ ಪ್ರಕರಣವು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆಯೇ ಇದೀಗ ಮಾಜಿ ಶಾಸಕರ ಮಗನಿಗೆ ಬ್ಲಾಕ್ ಮಾಡಿ ಹಣ ವಸೂಲಿ ಮಾಡಲು ಮುಂದಾಗಿರುವ ಪ್ರಕಣವೊಂದು ಬೆಳಕಿಗೆ ಬಂದಿದೆ.
ಧಾರವಾಡ ಜಿಲ್ಲೆಯ ನವಲಗುಂದ ಕ್ಷೇತ್ರದ ಮಾಜಿ ಜೆ.ಡಿ.ಎಸ್ ಶಾಸಕ ಅವರ ಮಗ ನವೀನ ಕೋನರಡ್ಡಿಗೆ ಅನಾಮಧೇಯ ವಿಡಿಯೋ ಕಾಲ್ ಮೂಲಕ ಬ್ಲಾಕ್ಮೇಲ್ ಮಾಡಲಾಗಿದೆ. ಪ್ರಭಾವಿ ವ್ಯಕ್ತಿಗಳ ಮಕ್ಕಳನ್ನೇ ಈ ತಂಡ ಗುರಿಯಾಗಿಸಿ ಈ ಕೃತ್ಯ ಎಸಗುತ್ತಿದೆ.
ಮಾಜಿ ಶಾಸಕ ಎನ್.ಹೆಚ್.ಕೊನರೆಡ್ಡಿ ಅವರ ಪುತ್ರ ನವೀನ ಕೊನರಡ್ಡಿ ಗೆ ಹನಿ ಟ್ರ್ಯಾಪ್ ಮಾಡಿ 13,200 ಹಣವನ್ನು ವಸೂಲಿ ಮಾಡಿದ್ದಾರೆ. ಫೆಬ್ರವರಿ 18 ರಂದು ನವೀನ ಕೋನರಡ್ಡಿಗೆ ಅಪರಿಚಿತ ನಂಬರ್ ಇಂದ ವ್ಯಾಟ್ಸ್ ಆಪ್ ವಿಡಿಯೋ ಕಾಲ್ ಬಂದಿದೆ. ಕಾಲ್ ರಿಸೀವ್ ಮಾಡಿದಾಗ ಯಾರು ಕಂಡಿಲ್ಲ. ಕಾಲ್ ಕಟ್ ಮಾಡಿದ ನವೀನ್ ಗೆ ಅರ್ಧ ಗಂಟೆಯಲ್ಲೇ ಶಾಕ್ ಕಾದಿತ್ತು. ಅದುವೇ ಆ ಕರೆ ಮಾಡಿದ ನಂಬರ್ ನಿಂದ ಎಡಿಟ್ ಮಾಡಲಾದ ಅಶ್ಲೀಲ ವಿಡಿಯೋ ಒಂದು ನವೀನ್ ಮೊಬೈಲ್ ಗೆ ಬಂದಿತ್ತು.
ಬಳಿಕ ನವೀನ್ಗೆ ಒಂದು ಸಂದೇಶ ರವಾನೆ ಮಾಡಲಾಗಿದೆ. ಈ ವಿಡಿಯೋ ಯಾರಿಗೂ ಶೇರ್ ಮಾಡಬಾರದು ಅಂದ್ರೆ ಹಣ ಹಾಕುವಂತೆ ತಂಡ ಬೆದರಿಸಿದೆ. ಮರ್ಯಾದೆಗೆ ಅಂಜಿದ ನವೀನ 13,200 ರೂ ಗಳನ್ನ ಹಂತ ಹಂತವಾಗಿ ಫೋನ್ ಪೇ ಮೂಲಕ ವರ್ಗಾಯಿಸಿದ್ದಾರೆ. ಈ ಬಗ್ಗೆ ತಮ್ಮ ತಂದೆಯ ಗಮನಕ್ಕೆ ತಂದಾಗ ಅವರು ಪೊಲೀಸರಿಗೆ ತಿಳಿಸುವಂತೆ ಸೂಚನೆ ನೀಡಿದರು. ನಂತರ ನವೀನ ಹುಬ್ಬಳ್ಳಿ ಹುಬ್ಬಳ್ಳಿಯ ಸೈಬರ್ ಕ್ರೈಮ್ ನಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನನಗೆ ಫೆ.18 ರಂದು ವಾಟ್ಸಪ್ ಕಾಲ್ ಬಂದಿತ್ತು. ಅದನ್ನು ರಿಸಿವ್ ಮಾಡಿದಾಗ ಯಾರ ಮುಖ ಕಾಣಲಿಲ್ಲ ಕೆಲವೇ ಸೆಕೆಂಡನಲ್ಲಿ ನಾನು ಕಾಲ್ ಕಟ್ ಮಾಡಿದ, ನಂತರ ಅವರೊಂದು 12 ಸೆಕೆಂಡ್ ವಿಡಿಯೋ ಕಳಿಸಿದರು. ನನ್ನ ಫೋಟೊ ಎಡಿಟ್ ಮಾಡಿ ಅಶ್ಲೀಲ ವಿಡಿಯೋಗೆ ಮಾಡಿದ್ದರು. ಬಳಿಕ ಈ ವಿಡಿಯೋ ವೈರಲ್ ಮಾಡಬಾರದೆಂದರೆ ಹಣ ಬೇಕೆಂದು ಬೇಡಿಕೆ ಇಟ್ಟರು. ನನ್ನ ತಪ್ಪಿಲ್ಲದಿದ್ದರೂ ಅವರಿಗೆ ಹಣ ಹಾಕಿದೆ. ಬಳಿಕ ನಮ್ಮ ತಂದೆಯವರ ಮಾತಿನಂತೆ ಸೈಬರ್ ಕ್ರೈಮ್ ನಲ್ಲಿ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.
ಸದ್ಯ ಈ ತನಿಖೆ ಆರಂಭಿಸಿರುವ ಸೈಬರ್ ಪೊಲೀಸರಿಗೆ ಪ್ರಾಥಮಿಕ ಮಾಹಿತಿಯಲ್ಲೇ ಇದು ರಾಜಸ್ತಾನ ಮೂಲದ ಚಾಲಕಿಗಳ ಕೆಲಸ ಎಂದು ತಿಳಿದು ಬಂದಿದೆ. ಅಲ್ಲದೇ ಈ ತಂಡದ ಖಾತೆ ಕೂಡ ಲಾಕ್ ಮಾಡಿದ್ದಾರೆ. ನವೀನ್ ದೂರು ನೀಡಿದ ನಂತರ ಯಾವುದೇ ನಂಬರ್ ಇಂದ ಕಾಲ್ ಬಂದಿಲ್ಲ ಎಂದು ಹೇಳಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಧಾರವಾಡದ ಉದ್ಯಮಿಯೊಬ್ಬರಿಗೆ ಅಪರಿಚಿತ ಸಂಖ್ಯೆಯಿಂದ ವಿಡಿಯೋ ಕಾಲ್ ಬಂದಿದೆ. ನಗ್ನ ಮಹಿಳೆ ಅವರೊಂದಿಗೆ ಕೆಲವು ಸೆಕೆಂಡುಗಳ ಕಾಲ ಮಾತನಾಡಿದ್ದಾಳೆ. ನಂತರ ರೆಕಾರ್ಡಿಂಗ್ ಮಾಡಿದ ವಿಡಿಯೋ ಸಂಭಾಷಣೆಯಲ್ಲಿ ಆತನನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ನಂತರ ಉದ್ಯಮಿ ಸೈಬರ್ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಈ ಸಂಬಂಧ ಎರಡು ಕೇಸ್ ಗಳು ದಾಖಲಾಗಿದ್ದು. ಇದಕ್ಕಾಗಿ ವಿಶೇಷ ತಂಡ ರಚಿಸಿದ್ದೇವೆ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಬೂ ರಾಮ್ ಹೇಳಿದ್ದಾರೆ.
Follow us on Social media