ಹೈದರಾಬಾದ್: ಪೂರ್ವ ಲಡಾಖ್ ನಲ್ಲಿ ಚೀನಾ ಯೋಧರ ದಾಳಿಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಕುಟುಂಬಕ್ಕೆ ರೂ.5 ಕೋಟಿ ಪರಿಹಾರ ನೀಡುವುದಾಗಿ ತೆಲಂಗಾಣ ಸರ್ಕಾರ ಘೋಷಿಸಿದೆ.
ಈ ಕುರಿತು ಮಾತನಾಡಿರುವ ತೆಲಂಗಾಣ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಹುತಾತ್ಮ ಯೋಧ ಸಂತೋಷ್ ಬಾಬು ಕುಟುಂಬಕ್ಕೆ ರೂ.5 ಕೋಟಿ ಪರಿಹಾರ ನೀಡಲಾಗುತ್ತಿದ್ದು, ಉಳಿದ ಯೋಧರ ಕುಟುಂಬಕ್ಕೆ ತಲಾ ರೂ.10 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ರೂ.5 ಕೋಟಿ ಪರಿಹಾರವಷ್ಟೇ ಅಲ್ಲದೆ, ಸಂತೋಷ್ ಬಾಬು ಅವರ ಕುಟುಂಬಕ್ಕೆ ನಿವಾಸ ಹಾಗೂ ಸಂತೋಷ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದು, ಹುತಾತ್ಮ ಯೋಧನ ಮನೆಗೆ ಸ್ವತಃ ತೆರಳಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ಗಡಿಯಲ್ಲಿ ನಮ್ಮ ದೇಶವನ್ನು ಕಾಯುತ್ತಿರುವ ಯೋಧರೊಂದಿಗೆ ಇಡೀ ದೇಶ ನಿಲ್ಲಲಿದೆ. ಹುತಾತ್ಮ ಯೋಧರ ಕುಟುಂಬಸ್ಥರೊಂದಿಗೆ ನಾವು ನಿಲ್ಲಬೇಕು. ಅವರಿಗೆ ಬೆಂಬಲ ನೀಡಬೇಕು. ಇಡೀ ದೇಶ ನಿಮ್ಮೊಂದಿಗೆ ಎಂಬ ಧೈರ್ಯವನ್ನು ನಾವು ನೀಡಬೇಕು ಎಂದಿದ್ದಾರೆ.
Follow us on Social media