ಹಾಸನ: ಹಾಸನ ಜಿಲ್ಲೆ ಬೇಲೂರು ಸಮೀಪ ಮಂಗಳವಾರ ಕೆಎಸ್ಆರ್ ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಐವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಬೇಲೂರು ತಾಲ್ಲೂಕಿನ ಸಂಕೇನಹಳ್ಳಿ ತಿರುವಿನಲ್ಲಿ ಕೆಎಸ್ಆರ್ ಟಿಸಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಭೀಕರ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೋರ್ವ ವಿದ್ಯಾರ್ಥಿ ಆಸ್ಪತ್ರೆ ಗೆ ಸಾಗಿಸೋ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.
ಮೃತ ವಿದ್ಯಾರ್ಥಿಗಳು ಬೇಲೂರಿನ ವಿದ್ಯಾ ವಿಕಾಸ ಕಾಲೇಜಿನ ಪಿಯು ಕಾಲೇಜು ವಿದ್ಯಾರ್ಥಿಗಳಾಗಿದ್ದು. ಇವರು ಬೇಲೂರು ಪಟ್ಟಣದ ನಿವಾಸಿಗಳು. ಇವರೆಲ್ಲ ಕಾಲೇಜು ಮುಗಿಸಿ ಕಾರಿನಲ್ಲಿ ಹಾಸನದತ್ತ ಹೊರಟಿದ್ದರು. ಈ ವೇಳೆ ಚಿಕ್ಕಮಗಳೂರಿನತ್ತ ಹೊರಟಿದ್ದ ಸಾರಿಗೆ ಬಸ್ಸಿಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಮೊಹಮ್ಮದ್ ಜಲಾನಿ, ಅಕ್ಮಲ್ ಖಾನ್, ಕೈಫ್ ಸೇರಿ ಐವರು ಸಾವನ್ನಪ್ಪಿದ್ದಾರೆ. ಇನ್ನು ಬಸ್ ನಲ್ಲಿದ್ದ ಹಲವರಿಗೆ ಗಾಯಗಳಾಗಿವೆ.
Follow us on Social media