ಕೊಚ್ಚಿ: ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕಿ ಸಹಿತ ಓರ್ವ ಶಿಕ್ಷಕ ಹಾಗೂ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ತಿರುವನಂತಪುರಂನ ದೈಹಿಕ ಶಿಕ್ಷಕಿ ಅಮೃತಾ (24), ಥಿರುವಳ್ಳ ಮೂಲದ ದೈಹಿಕ ಶಿಕ್ಷಕ ಅಭಿಮನ್ಯು (27), ಪೆರಿಂತಲಮನ್ನದ ಕಪ್ಪಿಲ್ ಹೌಸ್‌ನ ಸನಿಲ್ (27) ಬಂಧಿತ ಆರೋಪಿಗಳು.
ದೈಹಿಕ ಶಿಕ್ಷಕಿಯಾಗಿದ್ದುಕೊಂಡೇ ಬೆಂಗಳೂರಿನಿಂದ ತರಿಸಿಕೊಂಡು ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದು ಇದೀಗ 20 ಗ್ರಾಂ ಎಮಡಿಎಂಎ ವಶಕ್ಕೆ ಪಡೆಯಲಾಗಿದೆ.
ಮಾದಕ ವಸ್ತು ಮಾರಾಟದ ಬಗ್ಗೆ ಗುಪ್ತ ಮಾಹಿತಿ ದೊರೆತ ಬಳಿಕ ಈ ಗ್ಯಾಂಗ್ ನ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು.
ಆದರೆ ಹಲವು ಪ್ರಯತ್ನಗಳ ನಂತರ ಇನ್ಫೋಪಾರ್ಕ್ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Follow us on Social media