ರಿಯಾಧ್: ಇಸ್ಲಾಂ ಸ್ವೀಕರಿಸಿಲ್ಲ ಎಂದು ಮುಸ್ಲಿಮೇತರನನ್ನು ನಿಂದಿಸಿದ್ದ ವ್ಯಕ್ತಿಯನ್ನು ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿದೆ.
ಹೌದು.. ಏಷ್ಯಾ ಮೂಲದ ಮುಸ್ಲಿಮೇತರ ವ್ಯಕ್ತಿಯನ್ನು ಸೌದಿ ಅರೇಬಿಯಾ ಮೂಲದ ವ್ಯಕ್ತಿ ನಂದಿಸಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ವಿಡಿಯೋದಲ್ಲಿ ಅರಬ್ ಭಾಷೆಯಲ್ಲಿ ವ್ಯಕ್ತಿಯೋರ್ವ ಇಸ್ಲಾಂ ಮತವನ್ನು ಏಕೆ ಸ್ವೀಕರಿಸಿಲ್ಲ ಎಂದು ಹೇಳಿ ಮುಸ್ಲೀಮೇತರ ವ್ಯಕ್ತಿಯನ್ನು ನಿಂದಿಸುತ್ತಿದ್ದ. ಈ ವಿಡಿಯೋಗೆ ಭಾರಿ ವಿರೋಧ ಕೂಡ ವ್ಯಕ್ತವಾಗಿತ್ತು. ಇದೀಗ ಸೌದಿ ಅರೇಬಿಯಾ ಆಡಳಿತ ಮುಸ್ಲೀಮೇತರ ವ್ಯಕ್ತಿಯನ್ನ ನಿಂದಿಸಿದ್ದಾತನನ್ನ ಬಂಧಿಸುವಂತೆ ಆದೇಶ ನೀಡಿತ್ತು. ಅದರಂತೆ ಇಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮುಸ್ಲಿಮರ ಪವಿತ್ರ ರಂಜಾನ್ ಆಚರಣೆ ನಡೆಯುತ್ತಿರುವ ಈ ಹೊತ್ತಿನಲ್ಲೇ ಈ ಘಟನೆ ನಡೆದಿರುವುದು ಸೌದಿ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು.
Source : PTI
Follow us on Social media