ಇಸ್ಲಾಮಾಬಾದ್: ದೇಶದ ಸೈನ್ಯಕ್ಕಾಗಿ ಹುಲ್ಲು ತಿನ್ನಲು ಸಿದ್ಧವಿರುವುದಾಗಿ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿಕೊಂಡಿದ್ದಾರೆ.ಒಂದು ವೇಳೆ ದೇವರು ನನಗೆ ಅಧಿಕಾರ ಕೊಟ್ಟರೆ, ಹುಲ್ಲು ತಿಂದು ಸೈನ್ಯದ ಬಜೆಟ್ ಹೆಚ್ಚಿಸುವುದಾಗಿ ಎಆರ್ ವೈ ನ್ಯೂಸ್ ಗೆ ನೀಡಿದ ಸಂದರ್ಶದಲ್ಲಿ ಅಖ್ತರ್ ಹೇಳಿದ್ದಾರೆ.
ಶಸಸ್ತ್ರ ಪಡೆಗಳೊಂದಿಗೆ ನಾಗರಿಕರು ಏಕೆ ಒಟ್ಟಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ, ನಮ್ಮೊಂದಿಗೆ ಕುಳಿತು ನಿರ್ಧಾರ ಕೈಗೊಳ್ಳಿ ಎಂದು ಸೇನಾ ಮುಖ್ಯಸ್ಥರನ್ನು ಕೇಳುತ್ತೇನೆ. ಒಂದು ವೇಳೆ ಬಜೆಟ್ ಶೇ. 20 ರಷ್ಟಾಗಿದ್ದರೆ ಅದನ್ನು ನಾನು ಶೇ, 60 ರಷ್ಟು ಮಾಡುತ್ತೇನೆ.ನಾವು ಪರಸ್ಪರ ನಿಂಧಿಸಿಕೊಂಡರೆ ನಮಗೆ ನಷ್ಟ ಎಂದಿದ್ದಾರೆ.
1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಲು ಬಯಸಿದ್ದಾಗಿ ಅಖ್ತರ್ ಹೇಳಿಕೊಂಡಿದ್ದಾರೆ.
Follow us on Social media