ಸುಳ್ಯ : ಬೈಕ್ ಹಾಗೂ ಜೀಪು ನಡುವೆ ಅಪಘಾತ ಸಂಭವಿಸಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಪೆರಾಜೆಯ ಕುಂಬಳಚೇರಿ ಎಂಬಲ್ಲಿ ಮಾ.23 ರಂದು ನಡೆದಿದೆ.
ಪೆರಾಜೆಯ ನಿವಾಸಿ ಆರ್.ಡಿ. ವೆಂಕಪ್ಪ ಎಂಬವರ ಪುತ್ರ ದರ್ಶನ್ ಹಾಗೂ ಪೆರಾಜೆಯ ನಿವಾಸಿ ಲೋಕನಾಥ ಕುಂದಲ್ಪಾಡಿ ಅವರ ಪುತ್ರ ವಿಶ್ವದೀಪ್ ಎಂಬ ಇಬ್ಬರು ಬಾಲಕರು ಸುಳ್ಯದ ಸೈಂಟ್ ಜೋಸೆಫ್ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಗಳಾಗಿದ್ದು ಪರೀಕ್ಷೆ ಬರೆದು ಹಿಂತಿರುಗುತ್ತಿದ್ದರು.ಇಬ್ಬರು ಬೈಕಿನಲ್ಲಿ ಮನೆಗೆ ಬರುತ್ತಿದ್ದ ವೇಳೆ ಕುಂಬಳಚೇರಿ ಬಳಿಯ ಗಡಿಗುಡ್ಡೆ ಎಂಬಲ್ಲಿ ಮುಂದಿನಿಂದ ಬರುತ್ತಿದ್ದ ಜೀಪ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಜೀಪಿಗೆ ಗುದ್ದಿತೆನ್ನಲಾಗಿದೆ.ಡಾಮರ್ ಗೆ ತಲೆ ಒಡೆಯಲ್ಪಟ್ಟು ವಿಶ್ವದೀಪ್ ಸ್ಥಳದಲ್ಲೇ ಮೃತಪಟ್ಟರೆ ದರ್ಶನ್ ಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇವರಿಬ್ಬರನ್ನು ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವಿಶ್ವದೀಪ್ ಕೊನೆಯುಸಿರೆಳೆದಿದ್ದಾನೆ. ಇನ್ನು ಗಂಭೀರ ಸ್ಥಿತಿಯಲ್ಲಿರುವ ದರ್ಶನ್ ನನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.
Follow us on Social media