ಸುಳ್ಯ : ಇಲ್ಲಿನ ಪ್ರಸಿದ್ಧ ಕಾರ್ಣಿಕ ಕ್ಷೇತ್ರವಾಗಿರುವ ತೋಡಿಕಾನ ದೇವಸ್ಥಾನದ ದೇವರಗುಂಡಿಯ ಜಲಪಾತದ ಬಳಿ ಅಶ್ಲೀಲ ಫೋಟೋ ಶೂಟ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಸುಳ್ಯ ಪ್ರಚಂಡ ಆಗ್ರಹಿಸಿದೆ.
ತೊಡಿಕಾನ ದೇವರಗುಂಡಿಯ ಬಳಿ ಇತ್ತೀಚೆಗೆ ಕೆಲವರು ಆಶ್ಲೀಲ ಫೋಟೋ ತೆಗೆದಿರುವ ಘಟನೆಯ ಬಗ್ಗೆ ಅರಂತೋಡು ವಿಶ್ವ ಹಿಂದೂ ಪರಿಷದ್ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷದ್ ಭಜರಂಗದಳ ಸುಳ್ಯ ಪ್ರಚಂಡ ತೀವ್ರವಾಗಿ ಖಂಡಿಸಿದೆ. ಇಂತಹ ಘಟನೆಗಳಿಂದ ಭಕ್ತಾಭಿಮಾನಿಗಳ ಭಾವನೆಗಳಿಗೆ ಘಾಸಿಯುಂಟಾಗಿದೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಹಿಂಪರಿಷತ್, ಭಜರಂಗದಳ ಆಗ್ರಹಿಸಿದೆ.
ಅಲ್ಲದೆ, ತೊಡಿಕಾನ ದೇವಸ್ಥಾನ ಆಡಳಿತಕ್ಕೆ ಹಾಗೂ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ರವರಿಗೆ ಮನವಿ ಸಲ್ಲಿಸಲಾಗಿದ್ದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ ಕಲ್ಲಗದ್ದೆ, ವಿಹಿಂಪ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ್ ಪೈಕ, ಲತೀಶ್ ಗುಂಡ್ಯ, ಸನತ್ ಚೊಕ್ಕಾಡಿ, ರಾಜೇಂದ್ರ ಅರಂತೋಡು, ನವೀನ ಎಲಿಮಲೆ ಉಪಸ್ಥಿತರಿದ್ದರು.
Follow us on Social media