Breaking News

ಸುಳ್ಯ: ಎರಡು ಕಾರುಗಳ ಮಧ್ಯೆ ಪರಸ್ಪರ ಢಿಕ್ಕಿ-ಕಾರುಗಳು ಜಖಂ

ಸುಳ್ಯ: ಎರಡು ಕಾರುಗಳ ಮಧ್ಯೆ ಪರಸ್ಪರ ಢಿಕ್ಕಿ ಹೊಡೆದು ಕಾರುಗಳ ಮುಂಭಾಗ ನಜ್ಜುಗುಜ್ಜಾದ ಘಟನೆ ಸುಳ್ಯದ ಅರಂತೋಡಿನಲ್ಲಿ ನಡೆದಿದೆ.

ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಾರಿಗೆ ಸಂಪಾಜೆ ಕಡೆಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ವೇಗದ ಚಾಲನೆ ಹಾಗೂ ಅಜಾಗರೂಕತೆಯಿಂದ ಈ ಅಪಘಾತ ನಡೆದಿದೆ ಎನ್ನಲಾಗುತ್ತಿದೆ.

ಪರಿಣಾಮ ಎರಡೂ ಕಾರುಗಳ ಮುಂಭಾಗ ಪುಡಿಪುಡಿಯಾಗಿದ್ದು ಅದೃಷ್ಟವಶಾತ್ ಕಾರಿನಲಲ್ಇದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುಳ್ಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×