ಸಿಡ್ನಿ: ಶ್ರೀಲಂಕಾದ ಸ್ಟಾರ್ ಬ್ಯಾಟ್ಸ್‌ಮನ್ ದನುಷ್ಕಾ ಗುಣತಿಲಕ ಅತ್ಯಾಚಾರ ಆರೋಪದಲ್ಲಿ ಭಾನುವಾರ ಬಂಧನಕ್ಕೊಳಗಾಗಿದ್ದಾರೆ. ಅವರಿಲ್ಲದೆ ಶ್ರೀಲಂಕಾ ತಂಡ ಟಿ-20 ವಿಶ್ವಕಪ್ ನಿಂದ ಹೊರಬಿದ್ದಿದೆ ಎಂದು ತಂಡದ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಳೆದ ವಾರ ಸಿಡ್ನಿಯಲ್ಲಿ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ಸುಮಾರು 1 ಗಂಟೆ ಸುಮಾರಿನಲ್ಲಿ ದನುಷ್ಕಾ ಗುಣತಿಲಕ ತಂಗಿದ್ದ ಹೋಟೆಲ್ ನಿಂದ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ರೋಸ್ ಬೇಯಲ್ಲಿರುವ ಮನೆಯಲ್ಲಿ 29 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯಕ್ಕೊಳಗಾದ ವರದಿಗಳ ನಂತರ ರಾಜ್ಯ ಅಪರಾಧ ಕಮಾಂಡ್‌ನ ಲೈಂಗಿಕ ಅಪರಾಧಗಳ ಸ್ಕ್ವಾಡ್ ಮತ್ತು ಪೂರ್ವ ಉಪನಗರ ಪೊಲೀಸ್ ಏರಿಯಾ ಕಮಾಂಡ್‌ನ ಡಿಟೆಕ್ಟಿವ್‌ಗಳು ಜಂಟಿ ತನಿಖೆಯನ್ನು ಪ್ರಾರಂಭಿಸಿದರು.
ಮಹಿಳೆಯು ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಗುಣತಿಲಕ ಅವರೊಂದಿಗೆ ಹಲವಾರು ದಿನಗಳವರೆಗೆ ಮೇಸೆಜ್ ವಿನಿಮಯ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಇವರಿಬ್ಬರೂ ಬುಧವಾರ ಭೇಟಿಯಾಗಿದ್ದು, ದನುಷ್ಕಾ ಗುಣತಿಲಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಶನಿವಾರ ಅಪರಾಧ ನಡೆದ ಸ್ಥಳ ಪರಿಶೀಲಿಸಲಾಗಿದ್ದು, ಗುಣತಿಲಕ ಅವರನ್ನು ಸಿಡ್ನಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು ಮತ್ತು ಒಪ್ಪಿಗೆಯಿಲ್ಲದೆ ನಾಲ್ಕು ಬಾರಿ ಲೈಂಗಿಕ ಸಂಭೋಗ ನಡೆಸಿರುವ ಆರೋಪ ಕೇಳಿಬಂದಿದೆ.
Follow us on Social media