ರೋಟಿಗೂ ಪರೋಟಾಗೂ ಏನು ವ್ಯತ್ಯಾಸ ಅಂತ ಇನ್ಮೇಲೆ ಯಾರಾದರೂ ಕೇಳಿದರೆ, ರುಚಿಯನ್ನು ಹೊರತುಪಡಿಸಿದರೆ ಜಿಎಸ್ ಟಿ ದರವನ್ನು ಹೇಳಬೇಕಾಗುತ್ತದೆ.
ಇದ್ಯಾಕೆ ಹೀಗೆ ಅನ್ಕೊತಿದ್ದೀರಾ? ಹೌದು ಶುಕ್ರವಾರ ಅಥಾರಿಟಿ ಫಾರ್ ಅಡ್ವಾನ್ಸ್ಡ್ ರೂಲಿಂಗ್ (ಎ.ಎ.ಆರ್) ನ ಕರ್ನಾಟಕದ ಪೀಠ ಪರೋಟಾಗಳು ರೋಟಿಗಳಲ್ಲ, ರೋಟಿಗಳಿಗೆ ಶೇ.5 ರಷ್ಟು ಜಿಎಸ್ ಟಿ ವಿಧಿಸುವುದಕ್ಕೆ ಹೋಲಿಸಿದರೆ ಪರೋಟಾಗೆ ಶೇ.18 ರಷ್ಟು ಜಿಎಸ್ ಟಿಯನ್ನು ವಿಧಿಸಬಹುದು, ಏಕೆಂದರೆ ಅವುಗಳನ್ನು ಬಳಕೆ ಮಾಡುವ ಮುನ್ನ ಬಿಸಿ ಮಾಡಬೇಕಾಗುತ್ತದೆ ಎಂದು ಎಂದು ನೀಡಿರುವ ಆದೇಶವನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ದೇಶದಲ್ಲಿರುವ ಎಲ್ಲಾ ಸಮಸ್ಯೆಗಳ ನಡುವೆ ಪರೋಟಾದ ಅಸ್ತಿತ್ವದ ಬಗ್ಗೆ ಚಿಂತೆ ಮಾಡಬೇಕಾಗಿ ಬಂದಿರುವುದು ಅಚ್ಚರಿಯಾಗುತ್ತದೆ. ಭಾರತದ ಯಾವುದಾದರೂ ಜುಗಾಡ್ ಸ್ಕಿಲ್ ಕೈಗೆ ಸಿಕ್ಕಿದರೆ ಈ ಪರಿಸ್ಥಿತಿಯಲ್ಲಿ ಖಂಡಿತವಾಗಿಯೂ ಪರೋಟಾದ ಹೊಸ ತಳಿಯೇ ಹುಟ್ಟಬಹುದು ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.
ವಿವಿಧ ಬಗೆಗಳ ಪರೋಟಾಗಳಿಗೆ ವಿಧಿಸಲಾಗಿರುವ ಜಿಎಸ್ ಟಿ ದರಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಕೋರಿ ಬೆಂಗಳೂರು ಮೂಲದ ರೆಡಿ ಟು ಕುಕ್ ಆಹಾರ ತಯಾರಿಕಾ ಕಂಪನಿ ಕೇಳಿದ್ದರ ಹಿನ್ನೆಲೆಯಲ್ಲಿ ಕರ್ನಾಟಕದ ಪೀಠ ಈ ವಿವರಣೆ ನೀಡಿದೆ.
ಟ್ವಿಟರ್ ನಲ್ಲಿ ಜನತೆ ಈ ಬಗ್ಗೆ ಹಾಸ್ಯ ಮಾಡುತ್ತಿದ್ದು, ಟ್ವೀಟಿಗರ ಅಭಿಪ್ರಾಯ ಹೀಗಿದೆ. ” ಹೊಸ ಜಿಎಸ್ ಟಿ ಆದೇಶದ ಪ್ರಕಾರ, ರೋಟಿ, ಚಪಾತಿಗೆ: ಶೇ.5 ರಷ್ಟು ಜಿಎಸ್ ಟಿ, ಪರೋಟಾಗೆ ಶೇ.18 ರಷ್ಟು ಜಿಎಸ್ ಟಿ. ಕೇರಳ ಪರಾಟ ರೋಟಿಯಲ್ಲ, ಸೇವಿಸುವುದಕ್ಕೆ ಸಿದ್ಧವಿರುವ ರೋಟಿಯ ರೀತಿಯಲ್ಲಿ ಪರೋಟ ಇಲ್ಲ, ಪರೋಟಾವನ್ನು ತಿನ್ನುವುದಕ್ಕೆ ಮುನ್ನ ಬಿಸಿ ಮಾಡಬೇಕಾಗುತ್ತದೆ. ಹೈಟ್ ಆಫ್ ಇಂಡಿಯನ್ ಬ್ಯುರೋಕ್ರೆಸಿ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೊಬ್ಬರು ಪರೋಟಾದಲ್ಲಿ ಹೆಚ್ಚಿನ ಅಕ್ಷರಗಳಿವೆ, ಆದ್ದರಿಂದ ಹೆಚ್ಚಿನ ತೆರಿಗೆ ಎಂದು ಹಾಸ್ಯ ಮಾಡಿದ್ದಾರೆ. ಇನ್ನೊಬ್ಬರು “ಪೂರಿಗೆ ಹೋಲಿಕೆ ಮಾಡಿದರೆ ಅಮೃತ್ ಸರದ ಛೋಲೆ ಕುಲ್ಚೆಗೆ ಹೆಚ್ಚಿನ ದರ ಏಕೆ ನಿಗದಿಮಾಡಬಾರದು? ಏಕೆಂದರೆ ಛೋಲೆ ಕುಲ್ಚೆಯಲ್ಲಿ ಆಲೂಗಡ್ಡೆ ಹಾಕಿರುತ್ತಾರೆ. ಅದಕ್ಕೆ ಶೇ.28ರಷ್ಟು ತೆರಿಗೆ ವಿಧಿಸುವುದೇ ಸರಿ ಎಂದು ಟೀಕಿಸಿದ್ದಾರೆ.
Follow us on Social media