ಬೆಂಗಳೂರು : ಕನ್ನಡ ಸಿನಿಮಾ ಶುಗರ್ಲೆಸ್ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದ ನಟ ರಾಕ್ಲೈನ್ ಸುಧಾಕರ್ ಅವರ ನಿಧನದಿಂದ ಖಾಲಿಯಾದ ಜಾಗವನ್ನು ಇದೀಗ ತುಳು ಚಿತ್ರ ನಟ, ಮಜಾ ಟಾಕೀಸ್ ನ ಕಾಮಿಡಿ ಸ್ಟಾರ್ ಕುಸೆಲ್ದರಸೆ ನವೀನ್ ಡಿ. ಪಡೀಲ್ ಅವರು ತುಂಬುತ್ತಿದ್ದಾರೆ.
ದಿವಂಗತ ಸುಧಾಕರ್ ಅವರ ಪಾತ್ರದ ಹಲವಾರು ಸನ್ನಿವೇಶಗಳನ್ನು ಈಗಾಗಲೇ ಚಿತ್ರೀಕರಿಸಲಾಗಿತ್ತು. ಈಗ ಅದೇ ದೃಶ್ಯಗಳನ್ನು ನವೀನ್ ಅವರೊಂದಿಗೆ ಚಿತ್ರಿಸಲಾಗುತ್ತಿದೆ.
ಈ ಪಾತ್ರದ ಕುರಿತು ಪ್ರತಿಕ್ರಿಯಿಸಿದ ನವೀನ್, ಸುಧಾಕರ್ ನಿಧನರಾದ ಕೆಲವು ದಿನಗಳ ನಂತರ ನಿರ್ದೇಶಕ ಶಶಿಕಾಂತ್ ಸೇರಿದಂತೆ ಚಿತ್ರದ ತಂಡದ ಹಲವರು ನನನ್ನು ಸಂಪರ್ಕಿಸಿದರು. ತಕ್ಷಣವೇ ಚಿತ್ರೀಕರಣಕ್ಕೆ ಒಪ್ಪಿದೆ. ಈ ಪಾತ್ರ ನನಗೆ ಉತ್ಸಾಹ ತುಂಬಿದೆ. ಇನ್ನೊಂದು ವಿಶೇಷವೆಂದರೆ ಇದರಲ್ಲಿ ಸುಧಾಕರ್ ಅವರದ್ದು ಮಂಗಳೂರಿನವರ ಪಾತ್ರ. ಆ ಪಾತ್ರ ನನಗೆ ಸಿಕ್ಕಿದೆ. ದತ್ತಣ್ಣನಂಥ ಹಿರಿಯ, ಅನುಭವಿ ಕಲಾವಿದರೊಂದಿಗೆ ನಟಿಸುವುದು ಒಂದು ಖುಷಿಯ ವಿಚಾರ ಎಂದು ನವೀನ್ ಹೇಳಿದ್ದಾರೆ.
ಇನ್ನು ಶುಗರ್ಲೆಸ್ ಸಿನಿಮಾದಲ್ಲಿ ಮಧುಮೇಹ ನಿಭಾಯಿಸುವ ಯುವಕನಾಗಿ ಪ್ರಥ್ವಿ ಅಂಬಾರ್ ಗೆ ಪ್ರಿಯಾಂಕಾ ತಿಮ್ಮೇಶ್ ಜೋಡಿಯಾಗಲಿದ್ದಾರೆ.
Follow us on Social media