Breaking News

ಶೀಘ್ರ ಸಚಿವ ಸಂಪುಟ ವಿಸ್ತರಣೆ- ನಳೀನ್ ಕುಮಾರ್ ಕಟೀಲ್

ಸುಳ್ಯ: ರಾಜ್ಯ ಸಚಿವ ಸಂಪುಟ ಶೀಘ್ರದಲ್ಲೇ ವಿಸ್ತರಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್  ಕಟೀಲ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟಕ್ಕೆ ಹೊಸದಾಗಿ ಮೂವರು ಶಾಸಕರನ್ನು  ಸೇರಿಸಿಕೊಳ್ಳಲಾಗುವುದು. ಈ ಮೂಲಕ ವಿಸ್ತರಣೆ ಪ್ರಕ್ರಿಯೆ ಸುಗಮವಾಗಿ ನಡೆಯಲಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ಪರಮಾಧಿಕಾರವಾಗಿದ್ದು, ಅವರೇ ಅಂತಿಮ ತೀರ್ಮಾನ  ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಶಾಸಕ ಎಸ್. ಅಂಗಾರರಿಗೆ ಮಂತ್ರಿ ಸ್ಥಾನ ಸಿಗುವಂತೆ ನಮ್ಮ ಪ್ರಯತ್ನವಿರುತ್ತದೆ. ಈ ಬಾರಿ ಸಂಪುಟ ಪುನಾರಚನೆ
ಆಗುವ ಸಾಧ್ಯತೆಯಿಲ್ಲ. ಮೂರು ಸ್ಥಾನಗಳನ್ನು ಭರ್ತಿ ಮಾಡಲಷ್ಟೇ ಸಂಪುಟ ವಿಸ್ತರಣೆ ಸೀಮಿತವಾಗುತ್ತದೆ. ಈ ಬಗ್ಗೆ
ಮುಖ್ಯಮಂತ್ರಿಗಳು ಬಿಜೆಪಿ ಹೈ ಕಮಾಂಡ್ ಜೊತೆಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×