ಮೂಡಬಿದಿರೆ: ಬೈಕ್ ಮಾರಾಟಕ್ಕಿದೆ ಎಂದು ಯುವಕನೊರ್ವ ಓ ಎಲ್ ಎಕ್ಸ್ ನಲ್ಲಿ ಜಾಹಿರಾತು ಹಾಕಿದ್ದು, ಇದನ್ನು ನೋಡಿದ ಈಶಾನ್ ಶೆಟ್ಟಿ ಎಂಬಾತ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಅನ್ನು ತೆಗೆದುಕೊಂಡು ಪರಾರಿಯಾದ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.
ಅಕ್ಷಯ್ ಎಂಬವರು ತನ್ನ ಕೆಟಿಎಂ ಡ್ಯೂಕ್ ಬೈಕನ್ನು ಮಾರಾಟ ಮಾಡುವುದಾಗಿ ಓಎಲ್ಎಕ್ಸ್ ನಲ್ಲಿ ಜಾಹಿರಾತು ಹಾಕಿದ್ದರು.
ಜು.16ರಂದು ಈಶಾನ್ ಶೆಟ್ಟಿ ಎಂಬಾತ ಕರೆ ಮಾಡಿ ಬೈಕ್ ಅನ್ನು ಖರೀದಿಸುವುದಾಗಿ ಹೇಳಿ ಸಂಜೆ ಶಿರ್ತಾಡಿ ಬಸ್ ತಂಗುದಾಣ ಬಳಿ ಬರಲು ಹೇಳಿದ್ದನು.
ಅದರಂತೆ ಅಕ್ಷಯ್ ಬೈಕ್ ತಗೊಂಡು ಶಿರ್ತಾಡಿ ಬಸ್ ತಂಗುದಾಣ ಬಳಿಗೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಈಶಾನ್ ಶೆಟ್ಟಿ ಟೆಸ್ಟ್ ಡ್ರೈವ್ ನೆಪದಲ್ಲಿ ಬೈಕ್ ಅನ್ನು ಪಡೆದುಕೊಂಡು ಹೋದವನು ಮರಳಿಬಾರದೆ ವಂಚಿಸಿದ್ದಾನೆ.
ಈ ಬಗ್ಗೆ ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media