ಮಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಬಾರೀ ಗಾಳಿ ಮಳೆಗೆ ಕರಾವಳಿ ಪ್ರದೇಶ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಎಚ್ಚರಿಕೆಯ ಮುನ್ಸೂಚನೆ ನೀಡಿದೆ.
ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಇಂದು ಕೂಡ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಜಿಲ್ಲೆಯ ಪದವಿ ಸೇರಿದಂತೆ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿ ಗಳಿಗೆ ರಜೆ ಘೋಷಿಸಿದ್ದರು.
ಆದರೆ ಕೆಲವು ಕಾಲೇಜುಗಳು ರಜೆ ಘೋಷಿಸದೆ ಜಿಲ್ಲಾಧಿಕಾರಿಗಳ ಆಜ್ಞೆಯನ್ನು ತಿರಸ್ಕರಿಸಿರುವುದು ಗಮನಕ್ಕೆ ಬಂದಿದ್ದು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಎನ್ ಎಸ್ ಯು ಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ರವರು ದೂರನ್ನು ನೀಡಿದ್ದು ಈ ಸಂದರ್ಭದಲ್ಲಿ ಜಿಲ್ಲಾ ಎನ್ ಎಸ್ ಯು ಐ ಉಪಾಧ್ಯಕ್ಷ ಅನ್ವಿತ್ ಕಟೀಲ್ , ಮೋಕ್ಷಿತ್ ಉಪಸ್ಥಿತರಿದ್ದರು