ಮುಂಬೈ: ಜಿಯೊ ಡಿಜಿಟಲ್ ನಲ್ಲಿ ಅಮೆರಿಕ ಮೂಲದ ತಂತ್ರಜ್ಞಾನ ಕಂಪೆನಿ ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್ ಹೂಡಿಕೆ ಮಾಡಲಿದೆ. ಅದರ ಹೂಡಿಕೆ ಮೊತ್ತ 11 ಸಾವಿರದ 367 ಕೋಟಿ ರೂಪಾಯಿ ಅಂದರೆ ಷೇರು ಮೌಲ್ಯ ಶೇಕಡಾ 2.32ರಷ್ಟು.
ಇತ್ತೀಚಿನ ದಿನಗಳಲ್ಲಿ ಜಿಯೊ ಪ್ಲಾಟ್ ಫಾರ್ಮ್ ನಲ್ಲಿ ವಿದೇಶಿ ಕಂಪೆನಿಗಳು ಹೂಡಿಕೆ ಮಾಡುತ್ತಿರುವ ಮೂರನೇ ಬಹುದೊಡ್ಡ ಮೊತ್ತವಾಗಿದೆ. ಇದಕ್ಕೂ ಮುನ್ನ ಫೇಸ್ ಬುಕ್ 43 ಸಾವಿರದ 574 ಕೋಟಿ ರೂಪಾಯಿ, ಸಿಲ್ವರ್ ಲೇಕ್ 5 ಸಾವಿರದ 655.75 ಕೋಟಿ ರೂಪಾಯಿಗಳನ್ನು ಜಿಯೊ ಡಿಜಿಟಲ್ ನಲ್ಲಿ ಹೂಡಿಕೆ ಮಾಡಿದ್ದವು.
ಈ ಬಗ್ಗೆ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಜಗತ್ತಿನ ಪ್ರಮುಖ ತಂತ್ರಜ್ಞಾನ ವಿಸ್ಟಾ ಕಂಪೆನಿಯನ್ನು ನಮ್ಮ ಸಹಭಾಗಿಯಾಗಿ ಸ್ವಾಗತಿಸಲು ಹರ್ಷವಾಗುತ್ತಿದೆ.ಉಳಿದ ಎರಡು ಕಂಪೆನಿಗಳಂತೆ ವಿಸ್ಟಾ ಕೂಡ ಭಾರತದ ಡಿಜಿಟಲ್ ವ್ಯವಸ್ಥೆ ಬೆಳವಣಿಗೆ ಮತ್ತು ರೂಪಾಂತರಕ್ಕೆ ನಮ್ಮ ಜೊತೆ ಕೈಜೋಡಿಸಲಿದೆ ಎಂದಿದ್ದಾರೆ.
ಭಾರತದ ಮುಂಜೂಣಿ ಮೊಬೈಲ್ ಕಂಪೆನಿ ಜಿಯೊ ಡಿಜಿಟಲ್ ಜೊತೆ ಹೂಡಿಕೆ ಮಾಡಿ ಬೆಳವಣಿಗೆಗೆ ಕೈಜೋಡಿಸುತ್ತಿವುದು ನಮಗೆ ಖುಷಿಯ ವಿಚಾರ ಎಂದು ವಿಸ್ಟಾ ಸಿಇಒ ಮತ್ತು ಸ್ಥಾಪಕ ಅಧ್ಯಕ್ಷ ರಾಬರ್ಟ್ ಎಫ್ ಸ್ಮಿತ್ ಹೇಳಿದ್ದಾರೆ.
Follow us on Social media