ಬೆಂಗಳೂರು: ವಿಶ್ವ ಆರೋಗ್ಯ ದಿನದಂದು ಕರ್ನಾಟಕ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನೇತ್ರದಾನದ ಪ್ರತಿಜ್ಞೆ ಮಾಡಿದ್ದಾರೆ.
“ವಿಶ್ವ ಆರೋಗ್ಯ ದಿನದಂದು ನಾನು ನೇತ್ರದಾನ ಮಾಡುವ ಸಂಕಲ್ಪ ಕೈಗೊಂಡಿದ್ದು ಸಾರ್ಥಕ ಭಾವ ಮೂಡಿಸಿದೆ. ನಮ್ಮ ಕಣ್ಣುಗಳು ನಮ್ಮ ಜೀವಿತಾವಧಿಯ ನಂತರ ಮತ್ತೊಬ್ಬ ಜೀವಿಯ ಬದುಕಲ್ಲಿ ಬೆಳಕು ಮೂಡಿಸಬಹುದು. ನಮ್ಮ ನೇತ್ರದಾನ ಇನ್ನೊಂದು ಬದುಕಿಗೆ ವರದಾನವಾಗಬಹುದು.
ಆದ್ದರಿಂದ ಪ್ರತಿಯೊಬ್ಬರು ನೇತ್ರದಾನ ಮಾಡಬೇಕೆಂದು ಮನವಿ ಮಾಡುತ್ತೇನೆ.” ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ವಿಧಾನ ಸೌಧದ ಮುಂದೆ ಆಯೋಜಿಸಿದ್ದ ವಾಕ್‌ಥಾನ್‌ನಲ್ಲಿ ನೇತ್ರದಾನ ಮಾಡುವುದಾಗಿ ಅವರು ನೊಂದಾಯಿಸಿಕೊಂಡರು. “ನಮ್ಮ ಮರಣದ ನಂತರ ಕಣ್ಣುಗಳು ಇತರರ ಜೀವನದಲ್ಲಿ ಭರವಸೆಯ ಮತ್ತು ಬೆಳಕಿನ ಕಿರಣವನ್ನು ತರಬಲ್ಲವು, ನೇತ್ರದಾನವು ಇತರರಿಗೆ ವರದಾನವಾಗಿದೆ” ಸಚಿವರು ಹೇಳಿದ್ದಾರೆ.
ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕ ಡಾ.ಸುಜಾತಾ ರಾಥೋಡ್ ಉಪಸ್ಥಿತರಿದ್ದರು.
Follow us on Social media