ಬಂಟ್ವಾಳ : ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಕೈಯಿಂದ ದೂಡಾಡಿಕೊಂಡು ಸಾರ್ವಜನಿಕ ಅಶಾಂತಿಗೆ ಕಾರಣವಾದ ಮೂವರು ಬಸ್ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಾಲಕರಾದ ಚಿಂತನ್, ಹೊನ್ನಯ್ಯ, ಯತಿರಾಜ್ ಬಂಧಿತ ಆರೋಪಿಗಳಾಗಿದ್ದಾರೆ.
ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ವಿಟ್ಲ ಖಾಸಗಿ ಬಸ್ಸ್ ನಿಲ್ದಾಣದಲ್ಲಿದ್ದ ಮೂವರು ವ್ಯಕ್ತಿಗಳು ಸಾರ್ವಜನಿಕ ಸ್ಥಳವಾದ ಬಸ್ ತಂಗುದಾಣದಲ್ಲಿ ಪರಸ್ಪರ ಒಬ್ಬರಿಗೊಬ್ಬರು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಕೈಯಿಂದ ದೂಡಾಡಿಕೊಂಡು ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗವಾಗುವ ರೀತಿಯಲ್ಲಿ ಕಲಹ ನಡೆಸಿದ್ದ ಆರೋಪ ಇವರ ಮೇಲಿದ್ದು ಮೂವರನ್ನು ಹಿಡಿದು ಠಾಣೆಗೆ ಹಾಜರುಪಡಿಸಲಾಗಿದೆ.
Follow us on Social media