ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಅಡ್ಕ ಎಂಬಲ್ಲಿ ಬಾರ್ ಒಂದಕ್ಕೆ ನುಗ್ಗಿದ ಕಳ್ಳರು ಸುಮಾರು 49 ಸಾವಿರ ರೂ ಮೌಲ್ಯದ ಮದ್ಯದ ಬಾಟ್ಲಿಗಳನ್ನು ಕದ್ದೊಯ್ದಿದ್ದಾರೆ. ಈ ಕುರಿತು ಬಾರ್ ಮ್ಯಾನೇಜರ್ ನೀಡಿದ ದೂರಿನನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಅಡ್ಕ ಎಂಬಲ್ಲಿ ಘಟನೆ ಜುಲೈ 7ರ ರಾತ್ರಿಯಿಂದ ಜುಲೈ 8ರ ಬೆಳಗ್ಗೆ 9.30ರೊಳಗೆ ನಡೆದಿದೆ. ಬಾರ್ ಕಟ್ಟಡದ ಹಿಂಭಾಗದ ಬಾಗಿಲು ಹಾಗೂ ಅದರ ಬೀಗವನ್ನು ಕಳ್ಳರು ಮುರಿದು ಒಳ ಪ್ರವೇಶಿಸಿ ಒಟ್ಟು ಅಂದಾಜು ಮೌಲ್ಯ 49,656 ರೂಪಾಯಿಗಳ ಮದ್ಯದ ಬಾಟಲಿಗಳನ್ನು ಕಳವುಗೈದಿರುವುದಾಗಿದೆ. ಈ ಬಗ್ಗೆ ಬಾರ್ ಮ್ಯಾನೇಜರ್ ನೀಡಿದ ದೂರಿನ ಅನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media