ವಾರಣಾಸಿ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹಕ್ಷಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ.
ಹೆಲಿಕಾಪ್ಟರ್‌ಗೆ ಹಕ್ಷಿ ಡಿಕ್ಕಿ ಹೊಡೆದ ಬಳಿಕ ವಾರಣಾಸಿಯ ಪೊಲೀಸ್ ಲೈನ್ ನಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಹೆಲಿಕಾಪ್ಟರ್ ಪೊಲೀಸ್ ಲೈನ್ ನಿಂದ ಸುಲ್ತಾನ್ ಪುರಕ್ಕೆ ಟೇಕ್ ಆಫ್ ಆಗಿತ್ತು, ಆದರೆ ಪಕ್ಷಿ ಡಿಕ್ಕಿ ಹೊಡೆದ ಬಳಿಕ ಪೊಲೀಸ್ ಲೈನ್ ನಲ್ಲಿಯೇ ತುರ್ತು ಲ್ಯಾಂಡಿಂಗ್ ಮಾಡಲಾಯಿತು.
ಹೆಲಿಕಾಪ್ಟರ್ ನ ತಾಂತ್ರಿಕ ಪರೀಕ್ಷೆ ನಡೆಸಲಾಗಿದ್ದು,ವಿಶೇಷ ವಿಮಾನ ಲಕ್ನೋದಿಂದ ವಾರಣಾಸಿಗೆ ತಲುಪಿದ ನಂತರ ಸಿಎಂ ಯೋಗಿ ಪ್ರಯಾಣ ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ.
Follow us on Social media