ನವದೆಹಲಿ : ಇಂದಿನಿಂದ(ಜುಲೈ 1) ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 198 ರೂಪಾಯಿ ಇಳಿಕೆಯಾಗಿದ್ದು, ಇದೀಗ 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 2021 ರೂಪಾಯಿಗೆ ಇಳಿಕೆಯಾಗಿದೆ.
- ಈ ಹಿಂದೆ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 2,219 ರೂಪಾಯಿಯಾಗಿದ್ದು, ಇದೀಗ 198 ರೂಪಾಯಿ ಇಳಿಕೆಯಾಗಿ ಈಗ 2021ರೂ. ಆಗಿದೆ.ಇನ್ನು ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 182 ರೂಪಾಯಿ ಇಳಿಕೆಯಾಗಿದ್ದು, ಮುಂಬೈನಲ್ಲಿ 190 ರೂಪಾಯಿ 50 ಪೈಸೆ ಮತ್ತು ಚೆನ್ನೈನಲ್ಲಿ 187 ರೂಪಾಯಿ ಇಳಿಕೆಯಾಗಿದೆ.ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಕಡಿಮೆಯಾಗಿಲ್ಲ, ಮೇ 7 ರಂದು ಮೊದಲ ಬಾರಿಗೆ ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಲೀಟರ್‌ಗೆ 50 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು.