ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ವರ ಮಹಾಲಕ್ಷ್ಮಿ ಹಬ್ಬದ ಈ ದಿನ ಡಬಲ್ ಧಮಾಕಾ.
ಅವರ ಮುಂಬರುವ ಬಹು ನಿರೀಕ್ಷಿತ ಚಿತ್ರ ಯುವರತ್ನದ ಪೋಸ್ಟರ್ ಬಿಡುಗಡೆಯಾಗಿದೆ. ಕೆಜಿಎಫ್ ಚಿತ್ರ ತಯಾರಿಸುತ್ತಿರುವ ಹೊಂಬಾಳೆ ಫಿಲ್ಮ್ಸ್ ಯುವರತ್ನ ಚಿತ್ರವನ್ನು ಕೂಡ ನಿರ್ಮಿಸುತ್ತಿದ್ದು ಇಂದು ಬೆಳಗ್ಗೆ 10 ಗಂಟೆಗೆ ಯುವರತ್ನದ ಪೋಸ್ಟರ್ ಆಕರ್ಷಕ ಬರಹದೊಂದಿಗೆ ಬಿಡುಗಡೆಯಾಗಿದೆ.
ಇದನ್ನು ಭರ್ಜರಿಯಿಂದ ಸ್ವಾಗತಿಸಿರುವ ಅಪ್ಪು ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಖುಷಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ಯುವರತ್ನ ಪೋಸ್ಟರ್ ಪುನೀತ್ ರಾಜ್ ಕುಮಾರ್ ಇಂದು ಟ್ರೆಂಡಿಂಗ್ ನಲ್ಲಿದೆ.
