ಕೋಝಿಕೋಡ್ : 184 ಮಂದಿ ಪ್ರಯಾಣಿಕರನ್ನು ಹೊತ್ತುಕೊಂಡು ದುಬೈಯಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೋಝಿಕೋಡ್‌ನಲ್ಲಿ ರನ್‌ವೇಯಿಂದ ಜಾರಿ ಕಮರಿಗೆ ಉರುಳಿರುವ ಘಟನೆ ನಡೆದಿದೆ. ಘಟನೆಯಲ್ಲಿ ಪೈಲಟ್ ಸೇರಿದಂತೆ 16 ಮಂದಿ ಸಾವನ್ನಪ್ಪಿರುವ ಕುರಿತು ವರದಿಯಾಗಿದೆ. ಮಹಾರಾಷ್ಟ್ರ ಮೂಲದ ದೀಪಕ್ ವಸಂತ್ ಮೃತಪಟ್ಟ ಪೈಲಟ್.
ವಂದೇ ಭಾರತ್ ಮಿಷನ್ ನಲ್ಲಿ ದುಬೈಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೋಝಿಕೋಡ್ ಗೆ ಆಗಮಿಸುತ್ತಿತ್ತು. ಸಂಜೆ 7: 41ರ ಸಮಯದಲ್ಲಿ ಲ್ಯಾಂಡ್ ಆಗಿದ್ದು, ಲ್ಯಾಂಡ್ಂಗ್ ಸಮಯದಲ್ಲಿ ವಿಮಾನ ಪೈಲಟ್ ನ ನಿಯಂತ್ರಣ ಕಳೆದುಕೊಂಡಿದೆ. ಹಾಗೂ ರನ್ ವೇಯಿಂದ ಜಾರಿ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
ಸದ್ಯ ದೊರೆತ ಮಾಹಿತಿ ಪ್ರಕಾರ ವಿಮಾನದ ಪೈಲಟ್ ಹಾಗೂ ಮತ್ತೊಬ್ಬ ಪ್ರಯಾಣಿಕ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಸಹ ಪೈಲಟ್ ಗಂಭೀರ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಇನ್ನು ಘಟನೆಯ ತೀವ್ರತೆಗೆ ವಿಮಾನ ಇಬ್ಬಾಗವಾಗಿದ್ದು, ಮತ್ತೊಂದೆಡೆ ಸುರಿಯುತ್ತಿರುವ ಭಾರೀ ಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ.ಸ್ಥಳದಲ್ಲಿ 24 ಆ್ಯಂಬುಲೆನ್ಸ್ಗಳು ಹಾಗೂ ಅಗ್ನಿ ಶಾಮಕ ವಾಹನಗಳು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿವೆ.
Follow us on Social media