ನವದೆಹಲಿ : ಮೇ 31ರವರೆಗೂ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆಯಾಗಿದ್ದು,ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು, ರಾಜ್ಯಸರ್ಕಾರ , ಕೇಂದ್ರಾಡಳಿತ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಕೋವಿಡ್- 19 ಸೋಂಕು ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಂಚಿಕೊಳ್ಳುವ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಂಡ ಬಳಿಕ ಕೆಂಪು, ಹಸಿರು ಮತ್ತು ಹಳದಿ ವಲಯವನ್ನಾಗಿ ರೂಪಿಸುವ ನಿರ್ಧಾರವನ್ನು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಸರ್ಕಾರಕ್ಕೆ ಬಿಡಲಾಗಿದೆ.
ಯಾವುದಕ್ಕೆ ನಿರ್ಬಂಧ
* ದೇಶಿಯ ವೈದ್ಯಕೀಯ ಸೇವೆ, ಏರ್ ಅಂಬ್ಯುಲೆನ್ಸ್ ಮತ್ತು ಸುರಕ್ಷತೆ ಉದ್ದೇಶ ಅಥವಾ ಗೃಹ ಸಚಿವಾಲಯದಿಂದ ಅನುಮತಿ ಪಡೆದಿರುವ ವಿಮಾನ ಪ್ರಯಾಣ ಹೊರತುಪಡಿಸಿದಂತೆ ಎಲ್ಲಾ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣವನ್ನು ದೇಶಾದ್ಯಂತ ನಿರ್ಬಂಧಿಸಲಾಗಿದೆ.
* ಎಲ್ಲಾ ಸಿನಿಮಾ ಹಾಲ್ ಗಳು, ಶಾಫಿಂಗ್ ಮಾಲ್ , ಜಿಮ್, ಈಜುಕೊಳ, ಮನೋರಂಜನಾ ಪಾರ್ಕ್ , ಬಾರ್ ಗಳು ಮತ್ತು ಸಭೆ ಸಮಾರಂಭಗಳು ನಡೆಯುವ ಎಲ್ಲಾ ಸ್ಥಳಗಳೂ ಮೇ 31ರವರೆಗೂ ಮುಚ್ಚಲ್ಪಟ್ಟಿರುತ್ತವೆ.
ಕಚೇರಿಗಳು ಮತ್ತು ಉದ್ಯೋಗಸ್ಥರ ಆರೋಗ್ಯ ದೃಷ್ಟಿಯಿಂದ ಮೊಬೈಲ್ ಫೋನ್ ಹೊಂದಿರುವ ಪ್ರತಿಯೊಬ್ಬ ಉದ್ಯೋಗಿಯೂ ಆರೋಗ್ಯ ಸೇತು ಆಪ್ ಹೊಂದಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆರೋಗ್ಯ ಸೇತು ಆಪ್ ನಲ್ಲಿ ಆರೋಗ್ಯದ ಪ್ರತಿನಿತ್ಯ ಮಾಹಿತಿ ನೀಡುವಂತೆ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಯಾವುದಕ್ಕೆ ಅನುಮತಿ
* ಕಂಟೈನ್ ಮೆಂಟ್ ವಲಯ ಹೊರತುಪಡಿಸಿದಂತೆ ಉಳಿದ ಕಡೆಗಳಲ್ಲಿ ಸಾರಿಗೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆಟೋ, ಟ್ಯಾಕ್ಸಿಗಳು ಕಾರ್ಯನಿರ್ವಹಿಸಬಹುದಾಗಿದೆ.
* ಕ್ರೀಡಾ ಕಾಂಪ್ಲೆಕ್ಸ್ ಗಳು, ಸ್ಟೇಡಿಯಂಗಳು ತೆರೆಯಬಹುದು, ಆದರೆ, ವೀಕ್ಷಕರಿಗೆ ಪ್ರವೇಶ ನೀಡುವಂತಿಲ್ಲ.
Follow us on Social media