ನವದೆಹಲಿ: ಕೊರೋನಾ ಸಂಕಷ್ಟದಿಂದ ದೇಶದ ಪ್ರಮುಖ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇಂಡಿಯಾಗೆ(ಎಂಎಸ್ ಐ) ಈವರೆಗೆ 249 ಕೋಟಿ ರೂಪಾಯಿ ನಿವ್ವಳ ನಷ್ಟ ಕಂಡಿದೆ. ನಷ್ಟದಲ್ಲೂ ಒಂದು ರೀತಿ ಖುಷಿ ಪಡಬಹುದಾಗಿದೆ.!
ಹೌದು, ಅಚ್ಚರಿ ಎನಿಸಿದರೂ ಸತ್ಯ. ಪೇಟೆ ತಜ್ಞರು ಮಾಡಿದ ಅಂದಾಜಿಗಿಂತ ಕಡಿಮೆ ನಷ್ಟವಾಗಿದೆ. ಇಂದು ತ್ರೈಮಾಸಿಕ ವರದಿಯ ಪ್ರಕಟಿಸಿದ್ದು, 2020ರ ಮಾರ್ಚ್ ನಿಂದ ಜೂನ್ ವರೆಗೆ ಮಾರುತಿ ಸುಜುಕಿ ಕಂಪನಿಗೆ 249.ಕೋಟಿ ರೂಪಾಯಿ ನಷ್ಟವಾಗಿದೆ.
ಆದರೆ ನಷ್ಟದಲ್ಲೂ ಖುಷಿ ಪಡುವ ಸಂಗತಿ ಎಂದರೆ ಪೇಟೆ ವಿಶ್ಲೇಷಕರು 445 ಕೋಟಿ ರುಪಾಯಿ ನಷ್ಟ ಎದುರಾಗಬಹುದು ಎಂದು ನಿರೀಕ್ಷೆ ಮಾಡಿಲಾಗಿತ್ತು. ಆದರೆ ಅದಕ್ಕಿಂತ ಕಡಿಮೆ ನಷ್ಟವಾಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ 1,435.5 ಕೋಟಿ ಲಾಭ ಬಂದಿತ್ತು. ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ 76,599 ವಾಹನವನ್ನು ಮಾರಾಟ ಮಾಡಲಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿ 4,02,000 ವಾಹನ ಮಾರಾಟ ಆಗಿತ್ತು. ಮಾರುತಿ ಸುಜುಕಿ ಇಂಡಿಯಾ ಷೇರಿನ ಬೆಲೆಯು ಬುಧವಾರ 90.80 ರುಪಾಯಿ ಇಳಿಕೆಯಾಗಿದೆ.
Follow us on Social media