ಮುಂಬೈ: ಕೊರೋನಾ ಲಾಕ್’ಡೌನ್ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾದ ಕಾರಣ ನೊಂದು ಟಿವಿ ನಟ ಮನ್ಮೀತ್ ಗ್ರೇವಾಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಮುಂಬೈನ ಖಾರ್ಗರ್ ನಿವಾಸದಲ್ಲಿ ನಟ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.
ಪಂಜಾಬ್ ಮೂಲದ 23 ವರ್ಷದ ಗ್ರೇವಾಲ್ ಆದತ್ ಸೆ ಮಜ್ಯೂರ್, ಕುಲದೀಪಕ್ ನಂತಹ ಕಾರ್ಯಕ್ರಮಗಳಲ್ಲಿ ನಟಿಸಿದ್ದರು.
ಲಾಕ್’ಡೌನ್ ಪರಿಣಾಮ ಗ್ರೇವಾಲ್ ಅವರು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿತ್ತು. ಸಾಲ ತೀರಿಸಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗಿದ್ದರು. ಕೆಲ ವೆಬ್ ಸೀರೀಸ್ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಗ್ರೇವಾಲ್ ಲಾಕ್’ಡೌನ್ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಿದ್ದರು ಎಂದು ಸ್ನೇಹಿತ ಮತ್ತು ನಿರ್ಮಾಪಕ ಮಂಜಿತ್ ಸಿಂಗ್ ರಜಪೂತ್ ಅವರು ಹೇಳಿದ್ದಾರೆ.
Follow us on Social media