Breaking News

ರಿಲಯನ್ಸ್ ಜೊತೆ ಕೈಜೋಡಿಸಿದ ಫೇಸ್ ಬುಕ್: ಜಿಯೊ ಟೆಲಿಕಾಂನಲ್ಲಿ ಶೇ. 10ರಷ್ಟು ಹೂಡಿಕೆ

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ಟೆಲಿಕಾಂ ಕಂಪೆನಿ ಜಿಯೊದಲ್ಲಿ ಶೇಕಡಾ 10ರಷ್ಟು ಹೂಡಿಕೆ ಮಾಡುವುದಾಗಿ ಫೇಸ್ ಬುಕ್ ಬುಧವಾರ ಪ್ರಕಟಿಸಿದೆ.

ಈ ಮೂಲಕ ಸೋಷಿಯಲ್ ಮೀಡಿಯಾ ಸಂಸ್ಥೆ ತನ್ನ ಅಸ್ಥಿತ್ವವನ್ನು ಟೆಲಿಕಾಂ ಕ್ಷೇತ್ರದವರೆಗೆ ವಿಸ್ತರಿಸಿದ್ದು 5.7 ಶತಕೋಟಿ ಡಾಲರ್ (43 ಸಾವಿರದ 574 ಕೋಟಿ ರೂಪಾಯಿ)ಗಳಷ್ಟು ಹೂಡಿಕೆ ಮಾಡುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ.

https://twitter.com/reliancejio/status/1252796971011715072

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಹ ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿ, ಜಿಯೊ ಟೆಲಿಕಾಂ ಕ್ಷೇತ್ರದಲ್ಲಿ ಫೇಸ್ ಬುಕ್ 4.62 ಲಕ್ಷ ಕೋಟಿ ರೂಪಾಯಿ ಪೂರ್ವ ಹಣ ಉದ್ಯಮ ಮೊತ್ತವಾಗಿ ಹೂಡಿಕೆ ಮಾಡುತ್ತಿದ್ದು ಇದರಿಂದ ಫೇಸ್ ಬುಕ್ ನ ಹೂಡಿಕೆ ಜಿಯೊದಲ್ಲಿ ಶೇಕಡಾ 9.99ರಷ್ಟು ಪಾಲು ಆಗಲಿದೆ ಎಂದಿದೆ.

ಸಂಪೂರ್ಣವಾಗಿ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಜಿಯೊ ಡಿಜಿಟಲ್ ಸೇವಾ ಕಂಪೆನಿಯಾಗಿದ್ದು ರಿಲಯನ್ಸ್ ಜಿಯೊ ಇನ್ಫೊಕಾಮ್ ಲಿ. 388 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಸಾಲದಿಂದ ಮುಕ್ತವಾಗಲು ರಿಲಯನ್ಸ್ ಇಂಡಸ್ಟ್ರೀಸ್ ಫೇಸ್ ಬುಕ್ ನ ಜೊತೆ ಕೈಜೋಡಿಸಿದೆ.

Source : PTI

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×