ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದ ಭವ್ಯ ಶಿಲಾನ್ಯಾಸ ಸಮಾರಂಭ ನಡೆದಿದ್ದು ಇದೇ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಗವಾನ್ ರಾಮನ ಅನೇಕ ಶ್ರೇಷ್ಠ ಗುಣಗಳನ್ನು ಒಳಗೊಂಡ ಟ್ವೀಟ್ ಅನ್ನು ಮಾಡಿದ್ದಾರೆ.
ಭಗವಾನ್ ರಾಮ ಅತ್ಯುತ್ತಮ ಮಾನವೀಯ ಮೌಲ್ಯಗಳ ಸಾಕಾರವಾಗಿದೆ ಎಂದು ವಯನಾಡ್ ಸಂಸದರು ಹಿಂದಿಯಲ್ಲಿ ಮಾಡಿದ ಟ್ವೀಟ್ ಮೂಲಕ ‘ರಾಮ ನಮ್ಮ ಹೃದಯದ ಆಳದಲ್ಲಿ ನೆಲೆಸಿರುವ ಮಾನವೀಯತೆಯ ಚೈತನ್ಯ’ ಎಂದು ಹೇಳಿದರು.
“ರಾಮ ಪ್ರೀತಿಯ ಪ್ರತೀಕ, ದ್ವೇಷ ಇರುವಲ್ಲಿ ಇರನು. ರಾಮ ಸಹಾನುಭೂತಿ, ಅವನು ಎಂದಿಗೂ ಕ್ರೌರ್ಯಕ್ಕೆ ಆಸ್ಪದ ಕೊಡಲ್ಲ. ರಾಮ ನ್ಯಾಯ, ಅವನು ಎಂದಿಗೂ ಅನ್ಯಾಯದ ಜೊತೆ ಇರಲ್ಲ ಎಂದು ಗಾಂಧಿಯವರ ಟ್ವೀಟ್ ಮಾಡಿದ್ದಾರೆ.
Follow us on Social media