ನವದೆಹಲಿ: ಕೋಟ್ಯಾಂತರ ಹಿಂದುಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣಕ್ಕೆ ನಿನ್ನೆಯಷ್ಟೇ ಭೂಮಿಪೂಜೆ ನೆರವೇರಿಸಲಾಗಿದ್ದು ಇದರ ನಡುವೆ ಮುಸ್ಲಿಂ ಸಂಘಟನೆಯೊಂದು ರಾಮ ಮಂದಿರ ಕೆಡವಿ ಮತ್ತೆ ಮಸೀದಿ ಕಟ್ಟುತ್ತೇವೆ ಎಂದು ಪ್ರಚೋದನಕಾರಿ ಟ್ವೀಟ್ ಮಾಡಿದೆ.
ಬಾಬ್ರಿ ಮಸೀದಿ ಅಲ್ಲಿ ಹಿಂದೆಯೂ ಇತ್ತು. ಮುಂದೆಯೂ ಇರಲಿದೆ. ಯಾವು ತೀರ್ಪು ಇಲ್ಲಿ ಲೆಕ್ಕಕ್ಕಿಲ್ಲ ಎಂದು ನಿನ್ನೆ ಅಖಿಲ ಭಾರತ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಟ್ವೀಟ್ ಮಾಡಿತ್ತು. ಇದೀಗ ಇದರ ಬೆನ್ನಲ್ಲೇ ಅಖಿಲ ಭಾರತ ಇಮಾಮ್ ಸಂಘದ ಅಧ್ಯಕ್ಷ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.
ರಾಮಮಂದಿರವನ್ನು ಕೆಡವಿ ಮತ್ತೆ ಅಲ್ಲಿ ಮಸೀದಿ ನಿರ್ಮಿಸುತ್ತೇವೆ. ಮಸೀದಿ ಎಂದಿಗೂ ಮಸೀದಿಯಾಗಿಯೇ ಇರಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಮಸೀದಿ ಜಾಗದಲ್ಲಿ ಬೇರೆ ಏನನ್ನೇ ನಿರ್ಮಿಸಲು ನಮ್ಮ ಧರ್ಮ ಬಿಡುವುದಿಲ್ಲ ಎಂದು ಸಾಜಿದ್ ರಶೀದ್ ಟ್ವೀಟ್ ಮಾಡಿದ್ದಾರೆ.
ಬಾಬ್ರಿ ಮಸೀದಿ ನಿರ್ಮಿಸುವಾಗ ಅಲ್ಲಿ ಯಾವುದೇ ದೇವಾಲಯವನ್ನು ಕೆಡವಿರಲಿಲ್ಲ. ಆದರೆ ಈಗ ಮಸೀದಿ ಕಟ್ಟಲು ರಾಮಮಂದಿರವನ್ನು ಕೆಡವುತ್ತೇವೆ ಎಂದು ಸಾಜಿದ್ ಹೇಳಿದ್ದಾರೆ.
ಇದೇ ವೇಳೆ ರಾಮಮಂದಿರ ಶಿಲಾನ್ಯಾಸದಲ್ಲಿ ಭಾಗಿಯಾಗುವ ಮೂಲಕ ಪ್ರಧಾನಿ ಮೋದಿ ಅವರು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ.
Follow us on Social media