ಬೆಂಗಳೂರು : ಒಂದು ವರ್ಷದ ಬಜೆಟ್ ಗೆ ಒಪ್ಪಿಗೆ ಪಡೆಯುವ ಚರ್ಚೆ ಆಗ್ತಿದೆ.ರಾಜ್ಯ ಸರ್ಕಾರ ಹಣಕಾಸಿನ ಕಷ್ಟದಲ್ಲಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.
ವಿಧಾನ ಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರದ ಆರ್ಥಿಕ ಸ್ಥಿತಿ ಕಷ್ಟದಲ್ಲಿ ಇದೆ ಅಂತ ಹೇಳಿ ಜನಪ್ರಿಯ ಯೋಜನೆಗೆ ಕಡಿತ ಮಾಡುವುದು ಸರಿಯಲ್ಲ.ಶಾದಿಭಾಗ್ಯ ಬಡವರಿಗಾಗಿ ತಂದಿರುವ ಯೋಜ ನೆ.ಇದನ್ನ ರದ್ದು ಮಾಡ್ತೀವಿ ಅಂತ ಬಜೆಟ್ ಲ್ಲಿ ಹೇಳಿಲ್ಲ.ಅದ್ರೆ ಈಗ ಏಕಾಏಕಿ ಯೋಜನೆ ನಿಲ್ಲಿಸುವ ಕೆಲಸ ಮಾಡಿದ್ದಾರೆ.ಏಪ್ರಿಲ್ ಬಳಿಕ ಕಿಸಾನ್ ಯೋಜನೆ ಸೇರಿದಂತೆ ಹಲವು ಯೋಜನೆ ನಿಲ್ಲಿಸುವ ಲೆಕ್ಕಾಚಾರ ಹಾಕಿ ದ್ದಾರೆ. ಏಪ್ರಿಲ್ ಒಂದರ ಬಳಿಕ ಅನ್ನಭಾಗ್ಯ ಯೋಜನೆ ಕಡಿತ ಮಾಡುವ ಸಾಧ್ಯತೆ ಇದೆ. ಇದನ್ನ ನಾವು ಸದನ ದಲ್ಲಿ ಪ್ರಶ್ನೆ ಮಾಡ್ತೀವಿ ಎಂದರು.
Follow us on Social media