ಕಲಬುರಗಿ: ರಾಜ್ಯದಲ್ಲಿ ಕೊರೋನಾವೈರಸ್ ಗೆ ಏಳನೇ ಸಾವು ಸಂಭವಿಸಿದೆ. ದೇಶದಲ್ಲೇ ಮೊದಲ ಕೊರೋನಾ ಸಾವು ಸಂಭವಿಸಿದ್ದ ಕಲಬುರಗಿಯಲ್ಲಿಯೇ ಇಂದು ಇನ್ನೊಬ್ಬ ವ್ಯಕ್ತಿ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.
ಕೊರೋನಾ ಪೀಡಿತ ರೋಗಿ ಸಂಖ್ಯೆ-205 55 ವರ್ಷದ ವ್ಯಕ್ತಿ ಇಂದು ಕಲಬುರಗಿ ನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿ ಕಲಬುರಗಿ ನಗರದ ಮೋಮಿನಪುರ ಬಡಾವಣೆಯ ನಿವಾಸಿಯಾಗಿದ್ದು ಇವರಿಗೆ ಪಕ್ಕದ ಮನೆಯಲ್ಲಿ ದೆಹಲಿಯ ತಬ್ಲಿಘಿ ಸಮಾವೇಶಕ್ಕೆ ಹೋಗಿ ಬಂದಿದ್ದ ವ್ಯಕ್ತಿಯೊಡನೆ ಸಂಪರ್ಕವಿತ್ತು.
ಏ.10ರಂದು ಮೃತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರು.
ಕಲಬುರಗಿಯಲ್ಲಿ ಇದುವರೆಗೆ ೧೩ ಮಂದಿಗೆ ಸೋಂಕು ತಗುಲಿದ್ದು ಇಂದಿನ ಪ್ರಕರಣ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಒಟ್ಟಾರೆ ೮೫ ಮಂದಿಗೆ ಆಪ್ಸತ್ರೆಯಲ್ಲಿ ನಿಗಾದಲ್ಲಿಡಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
Follow us on Social media