ಬೆಂಗಳೂರು : ರಾಜ್ಯದಲ್ಲಿ ಮಂಗಳವಾರ ಸಂಜೆಯಿಂದ 34 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದೆ. ಇದು ಇಲ್ಲಿಯವರೆಗೆ ಒಂದೇ ದಿನದಲ್ಲಿ ವರದಿಯಾದ ಅತಿ ಹೆಚ್ಚಿನ ಪ್ರಕರಣವಾಗಿವೆ.
ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 313ಕ್ಕೇರಿಕೆಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ. 82 ಜನರು ಗುಣಮುಖರಾಗಿದ್ದಾರೆ.
ಬೆಂಗಳೂರಿನ 66 ವರ್ಷದ ಪುರುಷ ರೋಗಿ ಇಂದು ಮೃತಪಟ್ಟಿದ್ದಾರೆ. ಇವರು ಏ.10ರಿಂದ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದರು.