ರಾಜಸ್ಥಾನದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಬಂಡಾಯ ರಾಜಸ್ಥಾನದ ಸರ್ಕಾರವನ್ನು ಪತನದ ಅಂಚಿಗೆ ಕೊಂಡೊಯ್ದಿದೆ. ಇದೇ ವೇಳೆ ಪ್ರತಿಕ್ರಿಯಿಸಿರುವ ಸಚಿನ್ ಪೈಲಟ್ ತಾವು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಭವಿಷ್ಯದಲ್ಲೂ ನಾನು ಬಿಜೆಪಿ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.
ತಮಗೆ 34 ಶಾಸಕರ ಬೆಂಬಲವಿದೆ ಎಂದು ರಾಜಸ್ತಾನ ಡಿಸಿಎಂ ಸಚಿನ್ ಪೈಲಟ್ ಹೇಳಿದ್ದರು. ಇನ್ನು ಬಿಕ್ಕಟ್ಟು ಉಲ್ಬಣವಾಗುತ್ತಿದ್ದಂತೆಯೇ ಕಾಂಗ್ರೆಸ್ ಮನವೊಲಿಕೆಗೆ ಮುಂದಾಗಿದೆ. ಸಿಎಲ್ ಪಿ ಸಭೆಗೆ ಗೈರುಹಾಜರಾದವರ ವಿರುದ್ಧ ಕ್ರಮ ಕೈಗೊಳ್ಳುವ ಮಾತನಾಡುತ್ತಿದ್ದ ಕಾಂಗ್ರೆಸ್ ಈಗ ಮತ್ತೊಮ್ಮೆ ಮನವೊಲಿಕೆಗೆ ಮುಂದಾಗಿದೆ.
Follow us on Social media