ನವದೆಹಲಿ : ಲಾಕ್‌ಡೌನ್ ಸಮಯದಲ್ಲಿ ಕುಟುಂಬ ಸಮೇತ ಪಾರ್ಟಿ ಮಾಡಲು ತೆರಳಿ ಬಂಧನಕ್ಕೀಡಾಗಿದ್ದ ಡಿಹೆಚ್‌ಎಫ್‌ಎಲ್ ಮುಖ್ಯಸ್ಥರಾದ ಕಪಿಲ್ ಹಾಗೂ ಧೀರಜ್ ವಾಧವನ್ ಅವರನ್ನು ಯೆಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಮೇ.10ರವರೆಗೆ ಸಿಬಿಐ ವಶಕ್ಕೆ ನೀಡಿದೆ.
ಲಾಕ್‌ಡೌನ್ ಉಲ್ಲಂಘಿಸಿ ಪಾರ್ಟಿ ಮಾಡಲು ಮುಂಬೈನಿಂದ ಮಹಾಬಲೇಶ್ವರ್‌ದಲ್ಲಿರುವ ತಮ್ಮ ಫಾರ್ಮ್‌ಹೌಸ್‌ಗೆ ಬಂದಿದ್ದ ವಾಧವನ್ ಸಹೋದರರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ವಿಚಾರಣೆ ಮುಗಿದಿದ್ದರಿಂದ ಸಿಬಿಐ ಅಧಿಕಾರಿಗಳು ವಾಧವನ್ ಸಹೋದರರನ್ನು ವಶಕ್ಕೆ ಪಡೆದು ಮಹಾಬಲೇಶ್ವರ್‌ದಿಂದ ಮುಂಬೈಗೆ ಕರೆತಂದಿದ್ದರು.
ಇದೀಗ ಇಬ್ಬರೂ ಸಹೋದರರನ್ನು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಮೇ.10ರವರೆಗೆ ಇಬ್ಬರೂ ಸಹೋದರರನ್ನು ಸಿಬಿಐ ಅಧಿಕಾರಿಗಳ ವಶಕ್ಕೆ ನೀಡಿದೆ.
Follow us on Social media