ಮೈಸೂರು : ಮಹಿಳಾ ಹೆಡ್ ಕಾನ್ಸ್ಟೇಬಲ್ವೊಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರಿನ ಶಿವರಾಂಪೇಟೆಯಲ್ಲಿರುವ ಸಂಚಾರ ವಿಭಾಗದ ಎಸಿಪಿ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ.
ಕಚೇರಿಗೆ ಬೀಗಮುದ್ರೆ ಮಾಡಿ ಕಾಂಪೌಂಡ್ ಮೇಲೆ ಮಾಹಿತಿಯ ನೋಟಿಸ್ ಅಂಟಿಸಲಾಗಿದ್ದು, ಇಂದು ಆರೋಗ್ಯ ಇಲಾಖೆ ಹಾಗೂ ಮೈಸೂರು ಮಹಾ ನಗರ ಪಾಲಿಕೆ ಅಧಿಕಾರಿಗಳು ಡಿಸ್ಇನ್ಫೆಕ್ಟೆಂಟ್ ಸಿಂಪಡಿಸಿ ಕಟ್ಟಡವನ್ನು ಸ್ಯಾನಿಟೈಸ್ ಮಾಡಿಸಿದರು.
ಸೋಂಕು ದೃಢಪಟ್ಟಿರುವ ಮಹಿಳಾ ಹೆಡ್ ಕಾನ್ ಸ್ಟೇಬಲ್ರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖ ಲಿಸಲಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಎಸಿಪಿ (ಸೆಕೆಂಡರಿ ಕಾಂಟ್ಯಾಕ್ಟ್) ಅವರನ್ನು ಹೋಂ ಕ್ವಾರಂ ಟೈನ್ ಮಾಡಲಾಗಿದ್ದು, ಪ್ರಾಥಮಿಕ ಸಂಪರ್ಕಿತರಾದ ಇಬ್ಬರು ಕಾನ್ಸ್ಟೇಬಲ್, ಓರ್ವ ವಾಹನ ಚಾಲಕ ಮತ್ತು ಮೂವರು ಹೋಂ ಗಾರ್ಡ್ಗಳನ್ನು ಫೆಸಿಲಿಟಿ ಕ್ವಾರಂಟೈನ್ನಲ್ಲಿರಿಸಿ ನಿಗಾ ವಹಿಸಲಾಗಿದೆ.
ಪ್ರಾಥಮಿಕ ಸಂಪರ್ಕಿತ ಸಿಬ್ಬಂದಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ನಲ್ಲಿದ್ದ ಅಧಿಕಾರಿ (ಎಸಿಪಿ) ಅವರ ಕುಟುಂ ಬದ ಸದಸ್ಯರನ್ನೂ ಮನೆಯಲ್ಲೇ ಕ್ವಾರಂಟೈನ್ನಲ್ಲಿರು ವಂತೆ ಸೂಚಿಸಲಾಗಿದೆ. ಅವರು ಮನೆಯಿಂದ ಹೊರಗೆ ಬಾರದಂತೆ ನಿರ್ದೇಶನ ನೀಡಲಾಗಿದ್ದು, ಅವರಿಂದ ದೂರ ಇರುವಂತೆಯೂ ಮನೆ ಮುಂದೆ ಸೂಚನಾ ಫಲಕ ಹಾಕಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಇತ್ತೀಚೆಗೆ ಬೆಂಗಳೂರು, ನಂಜನಗೂಡು ಸೇರಿ ದಂತೆ ರಾಜ್ಯದ ಹಲವೆಡೆ ಪೊಲೀಸ್ ಠಾಣೆಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಬೆಂಗಳೂರಿನ ಪಾದ ರಾಯನಪುರದಲ್ಲಿ ಬಂದೋಬಸ್ತ್ ಕರ್ತವ್ಯ ಮುಗಿಸಿ ಹಿಂದಿರುಗಿದ್ದ ಕೆಎಸ್ಆರ್ಪಿ ಸಿಬ್ಬಂದಿಗಳಿಗೆ ಕೋವಿಡ್ -19 ಸೋಂಕು ತಗುಲಿರುವುದು ಪತ್ತೆಯಾದ ಕಾರಣ ಮೈಸೂರಿನ ಜಾಕಿ ಕ್ವಾಟ್ರಸ್ `ಬಿ’ ಬ್ಲಾಕ್ ಅನ್ನು ಇತ್ತೀಚೆ ಗಷ್ಟೇ ಸೀಲ್ಡೌನ್ ಮಾಡಲಾಗಿತ್ತು. ಇದೇ ಪ್ರಥಮ ಬಾರಿ ನಗರ ಸಂಚಾರ ವಿಭಾಗದ ಎಸಿಪಿ ಕಚೇರಿ ಯನ್ನು ಬಂದ್ ಮಾಡಲಾಗಿದೆ. ಈ ಕಚೇರಿಯನ್ನು ಮಾತ್ರ ಸೀಲ್ಡೌನ್ ಮಾಡಲಾಗಿದೆಯೇ ಹೊರತು, ಅಕ್ಕಪಕ್ಕದ ಎದುರಿನ ಅಂಗಡಿ ಮುಂಗಟ್ಟುಗಳು ಎಂದಿ ನಂತೆ ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿವೆ.
Follow us on Social media